ಬಿಪಿನ್ ರಾವತ್ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆಯುವ ಹಿಂದಿನ ದಿನ ಹೇಳಿದ್ದೇನು?

Prasthutha|

ನವದೆಹಲಿ: ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಡುವ ಹಿಂದಿನ ದಿನ ನೀಡಿದ್ದ ಕೊನೆಯ ಸಂದೇಶವನ್ನು ಭಾರತೀಯ ಸೇನೆ ಇಂದು 1.09 ನಿಮಿಷಗಳ ವೀಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡಿದೆ.

- Advertisement -

‘ಅಪ್ನೆ ಸೇನಾವೊ ಪರ್ ಹೈ ಹಮೆ ಗರ್ವ್, ಆವೊ ಮಿಲ್ಕರ್ ಮನಾಯೆ ವಿಜಯ್ ಪರ್ವ್'(ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ, ಎಲ್ಲರೂ ಒಟ್ಟಾಗಿ ಗೆಲುವಿನ ಸಂಭ್ರಮವನ್ನು ಆಚರಿಸೋಣ) ಇದು ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ಅವರು 1971 ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು ಅಲ್ಲದೆ, ವಿಜಯದ 50 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದರು.

ದೆಹಲಿಯ ಇಂಡಿಯನ್ ಗೇಟ್ ಕಾಂಪ್ಲೆಕ್ಸ್ ನಲ್ಲಿ ಇಂದು ನಡೆದ ‘ವಿಜಯ್ ಪರ್ವ್’ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಈ ವೀಡಿಯೋವನ್ನು ಪ್ಲೇ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ದೇಶದ ಉನ್ನತ ಸೇನಾಧಿಕಾರಿಗಳು ಉಪಸ್ಥಿತರಿದ್ದರು.



Join Whatsapp