ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಹೇಗೆ ಬಿಡುಗಡೆ ಮಾಡಿದಿರಿ?: ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

Prasthutha|

ಹೊಸದಿಲ್ಲಿ: 2002ರ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವನ್ನು ಹತ್ಯೆಗೈದ ಅಪರಾಧಿಗಳನ್ನು ಶಿಕ್ಷೆಯ ಅವಧಿ ಮುಗಿಯುವ ಮುನ್ನವೇ ಬಿಡುಗಡೆ ಕುರಿತ ಅರ್ಜಿಗಳ ಸರಣಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

- Advertisement -

ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ಮುತುವರ್ಜಿ ವಹಿಸಿತ್ತು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 14 ವರ್ಷಗಳ ಕಾಲ ಜೈಲಿನಲ್ಲಿದ್ದವರನ್ನು ಹೇಗೆ ಬಿಡುಗಡೆ ಮಾಡಲಾಯಿತು? ಇತರ ಕೈದಿಗಳನ್ನು ಯಾಕೆ ಬಿಡುಗಡೆ ಮಾಡಿಲ್ಲ. ಈ ಅಪರಾಧಿಗಳಿಗೆ ಮಾತ್ರ ಏಕೆ ನೀತಿಯ ಪ್ರಯೋಜನವನ್ನು ನೀಡಲಾಗಿದೆ? ಎಂದು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಪ್ರಶ್ನಿಸಿದೆ.

ಅಪರಾಧಿಗಳಿಗೆ 14 ವರ್ಷಗಳ ನಂತರ ಬಿಡುಗಡೆ ಮಾಡುವ ಮೂಲಕ ಸುಧಾರಣೆಗೆ ಅವಕಾಶ ನೀಡುವ ಈ ನಿಯಮವು ಇತರ ಕೈದಿಗಳಿಗೆ ಎಷ್ಟು ಅನ್ವಯಿಸುತ್ತದೆ? ನೀತಿಯನ್ನು ಏಕೆ ಆಯ್ದ ಕೆಲವರಿಗೆ ಮಾತ್ರ ಅನ್ವಯಿಸಲಾಗುತ್ತಿದೆ? ಸುಧಾರಿಸಲು ಮತ್ತು ಮತ್ತೆ ಸಮಾಜದ ಅಂಗವಾಗಲು ಅವಕಾಶವನ್ನು ಎಲ್ಲರಿಗೂ ನೀಡಬೇಕು. ಹೇಗೆ? ಇದು ಕಾರ್ಯರೂಪಕ್ಕೆ ಬರುತ್ತಿದೆಯೇ? ನಮ್ಮ ಜೈಲುಗಳು ಏಕೆ ತುಂಬಿ ತುಳುಕುತ್ತಿವೆ? ನಮಗೆ ದತ್ತಾಂಶ ನೀಡಿ ಎಂದು ನ್ಯಾಯಾಲಯ ಹೇಳಿದೆ.

Join Whatsapp