ಬಸ್ ಚಕ್ರದಡಿ ಸಿಲುಕಿದರೂ ಬದುಕುಳಿದ ಬೈಕ್ ಸವಾರ !

Prasthutha|

ಬೆಂಗಳೂರು: ಬಸ್ ಚಕ್ರದಡಿಗೆ ಸಿಲುಕಿದ ಬೈಕ್ ಸವಾರ ಪವಾಡ ಸದೃಶ ರೀತಿಯಲ್ಲಿ ಬದುಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ತಲೆ ಬಸ್ಸಿನ ಚಕ್ರದ ಕೆಳಗೆ ಸಿಲುಕಿಕೊಳ್ಳುತ್ತದೆ. ಬಸ್ಸಿನ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸುತ್ತಾನೆ.ಆಗ ಬೈಕ್ ಸವಾರ ಚಕ್ರದಡಿಯಿಂದ ಎದ್ದು ಬರುತ್ತಾನೆ.


ಈ ವೀಡಿಯೋ ಹಂಚಿಕೊಂಡಿರುವ ಜಂಟಿ ಆಯುಕ್ತ ರವಿಕಾಂತೇಗೌಡ ಅವರು ಬೈಕ್ ಸವಾರರಿಗೆ ಸಲಹೆಯನ್ನೂ ನೀಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಐಎಸ್ ಐ ಮಾರ್ಕ್ ಉಳ್ಳ ಗುಣಮಟ್ಟದ ಹೆಲ್ಮೆಟ್ ಅನ್ನೇ ಧರಿಸಿ ಎಂದು ಸೂಚಿಸಿದ್ದಾರೆ.



Join Whatsapp