ನಡುರಸ್ತೆಯಲ್ಲಿ ಬೈಕ್ ಸ್ಟಂಟ್: ವೀಡಿಯೋ ವೈರಲ್: ಬಳಿಕ ಪೊಲೀಸರು ಮಾಡಿದ್ದೇನು ಗೊತ್ತಾ?

Prasthutha|

ನವದೆಹಲಿ: ವ್ಯಕ್ತಿಯೊಬ್ಬ ಕಿಕ್ಕಿರಿದ ರಸ್ತೆಯಲ್ಲಿ ತನ್ನ ಬೈಕ್ ನಲ್ಲಿ ಸ್ಟಂಟ್ ಮಾಡಿದ್ದು ಪೊಲೀಸರಿಂದ ಚೆನ್ನಾಗಿ ತಪರಾಕಿ ಪಡೆದುಕೊಂಡಿದ್ದಾನೆ.

- Advertisement -

28 ಸೆಕೆಂಡುಗಳ ವೀಡಿಯೊದಲ್ಲಿ ಕಾಣವಂತೆ ವ್ಯಕ್ತಿಯು ತನ್ನ ಎರಡೂ ಕಾಲುಗಳನ್ನು ಒಂದು ಬದಿಯಲ್ಲಿ ಇಟ್ಟುಕೊಂಡು ಬೈಕ್ ಸವಾರಿ ಮಾಡುತ್ತಿದ್ದು, ಬೈಕ್ ನ ಹ್ಯಾಂಡಲ್ ಹಿಡಿಯಲು ಸಾರ್ವಜನಿಕರು ಹೇಳುತ್ತಿದ್ದರೂ ಅದನ್ನು ಕಡೆಗಣಿಸಿ ಒಂದು ಕೈ ಮಾತ್ರ ಬಳಸಿ ಡ್ರೈವಿಂಗ್ ಮಾಡುತ್ತಿದ್ದಾನೆ

- Advertisement -

ಭಾನುವಾರ ಈ ವೀಡಿಯೋ ಯಾರೋ ಅಪರಿಚಿತರು ಪೋಸ್ಟ್ ಮಾಡಿದ್ದು, ಈ ಕ್ಲಿಪ್ ಅನ್ನು ೧.೫ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿವೆ. ಈ ವೈರಲ್ ವೀಡಿಯೋ ಪೊಲೀಸರ ಕಣ್ಣಿಗೆ ಬಿದ್ದಿದ್ದು, ದುರ್ಗ್ ಪೊಲೀಸರು ಸ್ಟಂಟ್ ವೀರನಿಗೆ 4,200 ದಂಡ ವಿಧಿಸಿದ್ದಾರೆ. ಮತ್ತು ಸವಾರನ ಕಿವಿಹಿಂಡಿ ಸಾರ್ವಜನಿಕವಾಗಿ ಕ್ಯಾಮಾರ ಮುಂದೆ ಕ್ಷಮೆ ಕೇಳುವಂತೆ ಹೇಳಿದ್ದು, ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ.

Join Whatsapp