ಕಾರು, ಬೈಕ್ ಡಿಕ್ಕಿ: ಮದುಮಗ ಸೇರಿ ಇಬ್ಬರು ಮೃತ್ಯು

Prasthutha|

- Advertisement -

ಕಲಬುರಗಿ: ಬೈಕ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ‌ ನಡೆದಿದೆ.

ದೇವೇಂದ್ರಪ್ಪ (30) ಹಾಗೂ ವಸ್ತಾರಿ ಗ್ರಾಮದ ಗುರುರಾಜ (30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

ದೇವೇಂದ್ರಪ್ಪ ಅವರ ಮದುವೆ ನಿಶ್ಚಯವಾಗಿತ್ತು. ಹಾಗಾಗಿ, ಸಂಬಂಧಿಕರಿಗೆ ಮದುವೆ ಆಹ್ವಾನ ಪತ್ರ ನೀಡಲು ಜೇರಟಗಿಯತ್ತ ತೆರಳುತ್ತಿದ್ದರು. ಈ ವೇಳೆ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದಾರೆ.

ನೆಲೋಗಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Join Whatsapp