ರಸ್ತೆ ಬದಿಯ ತಡೆಗೋಡೆಗೆ ಬೈಕ್ ಡಿಕ್ಕಿ| ತಾಯಿ ಮಗು ಮೃತ್ಯು

Prasthutha|

ಧಾರವಾಡ: ರಸ್ತೆ ಬದಿಯ ತಡೆಗೋಡೆಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ನಗರದ ಹೊರವಲಯದಲ್ಲಿರುವ ಬೇಲೂರು ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.

- Advertisement -

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಾಗರಾಳದ ನಿವಾಸಿ ಸಂಗವ್ವ(20) ಮತ್ತು ಮಗು ಮಾಯಕ್ಕ(1) ಮೃತಪಟ್ಟವರು.

ಪತಿ ಜಕ್ಕಪ್ಪ ಹೆಗ್ಗಣ್ಣವರ್ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ. ಗರಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp