ಜಾಮೀನು ನೀಡಲು ಬಟ್ಟೆ ಒಗೆಯುವ ಶರತ್ತು ನೀಡಿದ್ದ ನ್ಯಾಯಾಧೀಶರ ಕರ್ತವ್ಯಕ್ಕೆ ಹೈಕೋರ್ಟ್ ಗುದ್ದು!

Prasthutha|

ಪಾಟ್ನಾ: ಬಿಹಾರದ ಅತ್ಯಾಚಾರ ಆರೋಪಿ ಒಬ್ಬರಿಗೆ ಊರಿನ ಮಹಿಳೆಯರ ಬಟ್ಟೆ ಒಗೆಯುವ ಷರತ್ತಿನ ಮೇಲೆ ಜಾಮೀನು ನೀಡಿದ್ದ ಬಿಹಾರದ ಜಾಂಜರ್ ಪುರ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರಿಗೆ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸದಿರಲು ಪಾಟ್ನಾ ಹೈಕೋರ್ಟ್ ಆದೇಶ ನೀಡಿದೆ.

- Advertisement -

ಧೋಬಿ ವೃತ್ತಿಯನ್ನು ನಡೆಸುತ್ತಿರುವ ಬಿಹಾರ ಮೂಲದ ಲಾಲನ್ ಕುಮಾರ್ ನನ್ನು ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ನಿಟ್ಟಿನಲ್ಲಿ ಆರೋಪಿಗೆ ಕನಿಷ್ಠ 6 ತಿಂಗಳು ಊರಿನ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಒಗೆಯುವ ಷರತ್ತಿನ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದ್ದರು. ಮಾತ್ರವಲ್ಲ ಬಟ್ಟೆ ಒಗೆಯಲು ಬೇಕಾದ ಸಾಮಾಗ್ರಿಗಳನ್ನು ಸ್ವತಃ ಖರೀದಿಸುವಂತೆ ಅದೇಶ ನೀಡಿದ್ದರು.

ಈ ನ್ಯಾಯಾಧೀಶರು ಹಿಂದೆಯೂ ವಿಭಿನ್ನ ತೀರ್ಪು ನೀಡಿದ್ದರು. ಜಾಮೀನಿಗೆ ಬಟ್ಟೆ ಒಗೆಯುವ ಷರತ್ತು ಸಾಮಾಜಿಕವಾಗಿ ಮಾನವೀಯ ಅಲ್ಲ ಎಂದು ಅಭಿಪ್ರಾಯ ಪಡಲಾಗಿದೆ.

Join Whatsapp