ಬಿಹಾರದಲ್ಲಿ ಸದ್ದಿಲ್ಲದೆ ಮುನ್ನುಗ್ಗುತ್ತಿವೆ ಎಡಪಕ್ಷಗಳು | 18 ಕ್ಷೇತ್ರಗಳಲ್ಲಿ ಮುನ್ನಡೆ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಾಗುತ್ತಿದ್ದು, ಕ್ಷಣದ ಕ್ಷಣದ ಮಾಹಿತಿಗಳು ಕುತೂಹಲ ಕೆರಳಿಸಿವೆ. ಬಿಹಾರದಲ್ಲಿ ಯಾರಿಗೆ ಹಾರ ಸಿಗಲಿದೆ? ಯಾರಿಗೆ ಪ್ರಹಾರ ಆಗಲಿದೆ? ಎಂದು ದೇಶದ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಮತ ಎಣಿಕೆ ಸುದ್ದಿಯಲ್ಲಿ ಎನ್ ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳು ಭಾರಿ ಸುದ್ದಿಯಲ್ಲಿವೆಯಾದರೂ, ಮಹಾಘಟಬಂಧನ್ ಕೂಟಕ್ಕೆ ಭಾರೀ ಬಲ ತುಂಬಿರುವ ಎಡಪಕ್ಷಗಳ ಅಭ್ಯರ್ಥಿಗಳು ಸದ್ದಿಲ್ಲದೆ ಹಲವು ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

- Advertisement -

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಸುಮಾರು 18 ಕ್ಷೇತ್ರಗಳಲ್ಲಿ ಎಡಪಕ್ಷದ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಎಡಪಕ್ಷಗಳು ಒಟ್ಟು 29 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸಿಪಿಐ (ಎಂಎಲ್) 19, ಸಿಪಿಐ 6 ಮತ್ತು ಸಿಪಿಎಂ 4 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಸದ್ಯದ ಮಾಹಿತಿ ಪ್ರಕಾರ, ಸಿಪಿಐ (ಎಂಎಲ್) 13, ಸಿಪಿಎಂ 3, ಸಿಪಿಐ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.  

- Advertisement -