ಬಿಹಾರ | ಮುಸ್ಲಿಮರ ಸಜೀವ ದಹನಕ್ಕೆ ಬಿಜೆಪಿ ಶಾಸಕ ಹರಿಭೂಷನ್ ಠಾಕೂರ್ ಕರೆ; ವೀಡಿಯೋ ವೈರಲ್

Prasthutha|

ಕಟಿಹಾರ್: ದಸರಾ ಹಬ್ಬದಂದು ರಾವಣನ ಪ್ರತಿಕೃತಿಯನ್ನು ಸುಡುವಂತೆ ಮುಸ್ಲಿಮರನ್ನು ಸಜೀವವಾಗಿ ದಹನ ಮಾಡಬೇಕೆಂದು ಬಿಜೆಪಿ ಬಿಹಾರ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಕರೆ ನೀಡಿದ್ದಾರೆ. ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಹಿಂದೂ ಯುವಕರು ಬಲಿಷ್ಠರಾಗಲು, ದೇಶದ ಜನರು ಬಲಿಷ್ಠರಾಗಲು ನಮಗೆ ಹನುಮಾನ್ ಬೇಕು. ರಾವಣನ ಲಂಕಾವನ್ನು ಹನುಮಾನ್ ಸುಟ್ಟಂತೆ, ಬಿಹಾರ ಮತ್ತು ದೇಶದಲ್ಲಿರುವ ರಾಕ್ಷಸನಂತಹ ಗುಣದವರನ್ನು ಸಜೀವವಾಗಿ ದಹನ ಮಾಡಬೇಕೆಂದು ಕರೆ ನೀಡಿದ್ದಾರೆ.

ಬಿಹಾರದಲ್ಲಿ ರಾವಣರು ಎಲ್ಲಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಠಾಕೂರ್, ನೀವು ಕಿಶನ್ ಗಂಜ್, ಪುರ್ನಿಯಾ, ಅರಾರಿಯ, ಜೋಕಿಹಾಟ್ ನಲ್ಲಿ ಏನಾಗುತ್ತಿದೆ ನೋಡಿ ಎಂದು ಸವಾಲೆಸೆದಿದ್ದಾರೆ.

- Advertisement -

ಬಿಹಾರದ ಕಿಶನ್‌ಗಂಜ್, ಅರಾರಿಯಾ, ಪುರ್ನಿಯಾ ಮತ್ತು ಕಟಿಹಾರ್ ಜಿಲ್ಲೆಗಳು ಸೀಮಾಂಚಲ್ ಪ್ರದೇಶದ ಭಾಗವಾಗಿದ್ದು, ಇಲ್ಲಿ 47 ಶೇಕಡಾ ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಮಧುಬನಿ ಜಿಲ್ಲೆಯ ಬಿಸ್ಫಿಯ ಬಿಜೆಪಿಯ ಶಾಸಕ ದ್ವೇಷ ಭಾಷಣಕ್ಕೆ ಹೆಸರುವಾಸಿಯಾಗಿದ್ದು, ಮುಸ್ಲಿಮರ ವಿರುದ್ಧ ಸದಾ ತನ್ನ ನಾಲಗೆಯನ್ನು ಹರಿಯಬಿಡುತ್ತಲೇ ಬಂದಿದ್ದಾರೆ.

ಈ ಹಿಂದೆ ಈತ ಭಾರತದಲ್ಲಿರುವ ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಂಡು ಅವರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಬೇಕೆಂದು ಹೇಳಿಕೆ ನೀಡಿದ್ದರು.

ಈತನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷಗಳು, ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದೆ.

Join Whatsapp