ವಿಕಲಚೇತನ ಮಗುವಿನ ವಿಮಾನಯಾನ ತಡೆದ “ಇಂಡಿಗೋ ಏರ್’ಲೈನ್ಸ್”

Prasthutha|

ರಾಂಚಿ: ಹೈದರಾಬಾದಿಗೆ ಪೋಷಕರೊಂದಿಗೆ ಪ್ರಯಾಣಿಸಬೇಕಿದ್ದ ವಿಕಲಚೇತನ ಮಗುವಿನ ವಿಮಾನಯಾನವನ್ನು ಇಂಡಿಗೋ ಏರ್’ಲೈನ್ಸ್ ತಡೆದಿದೆ. ಹೈದರಾಬಾದಿಗೆ ತೆರಳಲು ರಾಂಚಿ ವಿಮಾನ ನಿಲ್ದಾಣದಕ್ಕೆ ಪೋಷಕರೊಂದಿಗೆ ಬಂದಿದ್ದ ಮಗುವಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಬೋರ್ಡಿಂಗ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಸ್ಥಳದಲ್ಲಿದ್ದ ಸಹ ಪ್ರಯಾಣಿಕರು ಸಿಬ್ಬಂದಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ.

- Advertisement -

ಪ್ರಯಾಣ ತಡೆಹಿಡಿದ ಇಂಡಿಗೋ ಏರ್‌ಲೈನ್ಸ್‌ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು. ವೈರಲಾದ ವೀಡಿಯೋದಲ್ಲಿ, ಮಗು ಬೋರ್ಡಿಂಗ್ ಮಾಡಿಕೊಳ್ಳುತ್ತಿರುವ ವೇಳೆ ಸಿಬ್ಬಂದಿ, ಈ ಮಗು ಬೋರ್ಡಿಂಗ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಎಂದು ತಡೆಹಿಡಿಯುವ ದೃಶ್ಯ ಸೆರೆಯಾಗಿದೆ.

ಸಹ ಪ್ರಯಾಣಿಕರು ಮಗು ಪ್ರಯಾಣಿಸುವುದರಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದರೂ. ಪ್ರಯಾಣಿಕರಲ್ಲಿದ್ದ ವೈದ್ಯರ ನಿಯೋಗವು ಮಗುವಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಸಿಬ್ಬಂದಿ ಬಳಿ ಮನವಿಯನ್ನು ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಕಿವಿಗೊಡದ ಸಿಬ್ಬಂದಿ ಮಗುವಿನ ಪ್ರಯಾಣಕ್ಕೆ ಅವಕಾಶ ನೀಡದೇ ಹಿಂದೆ ಕಳುಹಿಸಿದ್ದಾರೆ.

- Advertisement -

ಅಮಾನವೀಯ ಘಟನೆಯ ಬಗ್ಗೆ ಪ್ರತಿಕ್ರಿಸಿರುವ =ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ, ಇಂತಹ ನಡವಳಿಕೆಯ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ. ಯಾವ ಮನುಷ್ಯನೂ ಇದರ ಮೂಲಕ ಹೋಗಬೇಕಾಗಿಲ್ಲ! ಈ ವಿಷಯವನ್ನು ನಾನೇ ತನಿಖೆ ನಡೆಸುತ್ತೇನೆ, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

Join Whatsapp