ಕಿವೀಸ್ ವಿರುದ್ಧ ಭಾರತಕ್ಕೆ 214 ರನ್​ಗಳ ಬೃಹತ್ ಗೆಲುವು!

Prasthutha|

ದಕ್ಷಿಣ ಆಫ್ರಿಕಾ: ಅಂಡರ್​-19 ವಿಶ್ವಕಪ್​ನ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಭಾರತ ಕಿರಿಯರ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ 214 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ.

- Advertisement -

ದ. ಆಫ್ರಿಕಾದ ಮ್ಯಾಂಗೌಂಗ್ ಓವಲ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 296 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್, 28.1 ಓವರ್​ಗಳಲ್ಲಿ ಕೇವಲ 81 ರನ್​ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ.

ಕಿವೀಸ್ ಪರ ಜಾಕ್ಸನ್ 19, ಕಮ್ಮಿಂಗ್ 16, ಥಾಂಪ್ಸನ್ 12, ನೆಲ್ಸನ್ 10 ರನ್​ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಸಹ ಎರಡಂಕಿ ದಾಟಲಿಲ್ಲ. ಮೂವರು ಶೂನ್ಯಕ್ಕೆ ನಿರ್ಗಮಿಸಿದರು.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ದೊಡ್ಡ ಮೊತ್ತ ಕಲೆ ಹಾಕಿತು. ಮುಶೀರ್ ಖಾನ್ ಟೂರ್ನಿಯಲ್ಲಿ ಸತತ ಎರಡನೇ ಶತಕ (131) ಸಿಡಿಸಿದ್ದಾರೆ. ಆದರ್ಶ್ ಸಿಂಗ್ 52 ರನ್‌ ಗಳಿಸಿದ್ದಾರೆ. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 295 ರನ್ ಗಳಿಸಿತು. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಮುಶೀರ್ ಬೌಲಿಂಗ್​ನಲ್ಲೂ ಮಿಂಚಿದ್ದು,,2 ವಿಕೆಟ್ ಪಡೆಯವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತದ ಪರ ಸೌಮ್ಯ ಪಾಂಡೆ ಅತಿ ಹೆಚ್ಚು ವಿಕೆಟ್ ಕಬಳಿಸಿದರು. 10 ಓವರ್‌‌ಗೆ ಕೇವಲ 19 ರನ್ ನೀಡಿ 4 ವಿಕೆಟ್ ಪಡೆದರು. ರಾಜ್​ ಲಿಂಬಾನಿ ಹಾಗೂ ಮುಶೀರ್ ತಲಾ 2, ನಮನ್ ಹಾಗೂ ಅರ್ಶಿನ್ ಒಂದೊಂದು ವಿಕೆಟ್ ಪಡೆದರು.

Join Whatsapp