ಭಟ್ಕಳ: ಸಾವರ್ಕರ್‌ ಧ್ವಜಕಟ್ಟೆ ತೆರವುಗೊಳಿಸಿದ ಬೆನ್ನಿಗೇ ಮರು ನಿರ್ಮಾಣ

Prasthutha|

ಭಟ್ಕಳ: ಮಂಡ್ಯ ಜಿಲ್ಲೆ ಕೆರಗೋಡಲ್ಲಿ ಹನುಮ ಧ್ವಜ ವಿವಾದದ ನಡುವೆಯೇ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ವೀರ ಸಾವರ್ಕರ್‌ ಧ್ವಜ ಕಟ್ಟೆ, ನಾಮಫಲಕ ಹಾಗೂ ಭಗವಾ ಧ್ವಜ ವಿವಾದ ಆರಂಭವಾಗಿದೆ.ಭಟ್ಕಳ ತಾಲೂಕಿನ ಹೆಬಳೆ ಗ್ರಾಪಂ ವ್ಯಾಪ್ತಿಯ ತೆಂಗಿನಗುಂಡಿ ಬಂದರಿನಲ್ಲಿ ನಿರ್ಮಿಸಿದ್ದ ಸಾವರ್ಕರ್‌ ಕಟ್ಟೆಯನ್ನು ಗ್ರಾಪಂ ಅಧಿಕಾರಿಗಳು ತೆರವುಗೊಳಿಸಿದ್ದು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಟ್ಟೆಯನ್ನು ಮೊದಲಿದ್ದ ಸ್ಥಳದಲ್ಲೇ ಮರು ನಿರ್ಮಿಸಿದ್ದಾರೆ ಎಂದು ವರದಿಯಾಗಿವೆ.

- Advertisement -

ತೆಂಗಿನಗುಂಡಿ ಬಂದರಿನಲ್ಲಿ 2022ರಲ್ಲಿ ಧ್ವಜಕಟ್ಟೆ ನಿರ್ಮಿಸಿ ಸಾವರ್ಕರ್‌ ನಾಮ ಫಲಕ ಅಳವಡಿಸಲಾಗಿತ್ತು. ಜ.27 2024ರಂದು ಗ್ರಾಪಂ ಅಧಿಕಾರಿಗಳು ಈ ಕಟ್ಟೆ ತೆರವುಗೊಳಿಸಿದ್ದಾರೆ. ಸಾವರ್ಕರ್ ನಾಮಫಲಕ, ಭಗವಧ್ವಜ ತೆರವುಗೊಳಿಸಲಾಗಿದ್ದು, ಆಕ್ರೋಶಗೊಂಡ ಬಿಜೆಪು ಬೆಂಬಲಿತ ಗ್ರಾಪಂ ಸದಸ್ಯರು, ಹಿಂದೂ ಸಂಘಟನೆಗಳ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಮಂಗಳವಾರ ಗ್ರಾಪಂ ಎದುರು ಧರಣಿ ನಡೆಸಿದ್ದಲ್ಲದೆ ಧ್ವಜ‌ಕಟ್ಟೆ ಮರು ನಿರ್ಮಿಸಿದ್ದಾರೆ ಎಂದು ವರದಿಯಾಗಿವೆ.

Join Whatsapp