ಟೆಲಿಕಾಂ ಕ್ಷೇತ್ರದಲ್ಲಿ ಶೇಕಡಾ 100ರಷ್ಟು ಎಫ್.ಡಿ.ಐ ಗೆ ಕ್ಯಾಬಿನೆಟ್ ಅನುಮೋದನೆ

Prasthutha|

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಟೆಲಿಕಾಂ ವಲಯದಲ್ಲಿ 100 ಶೇಕಡಾ ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ) ಯನ್ನು ಘೋಷಿಸಿದೆ. ಈ ಕುರಿತು ಮಾಹಿತಿ ನೀಡಿರುವ ಟೆಲಿಕಾಂ ಸಚಿವ ಸುದ್ದಿಗಾರರೊಂದಿಗೆ ಮಾತನಾಡಿ ಕ್ಯಾಬಿನೆಟ್ ಈ ತೀರ್ಮಾನಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.

- Advertisement -

ಈ ಹಿಂದೆ ಸ್ವಯಂಚಾಲಿತ ಮಾರ್ಗದ ಮೂಲಕ ಶೇಕಡಾ 49 ರಷ್ಟು ನೇರ ಹೂಡಿಕೆಗೆ ಅನುಮತಿ ನೀಡಲಾಗುತ್ತಿತ್ತು ಮತ್ತು ಅದಕ್ಕಿಂತ ಅಧಿಕ ಹೂಡಿಕೆಗಾಗಿ ಸರ್ಕಾರದ ಮೂಲಕ ನಿರ್ವಹಿಸಬೇಕಾಗಿತ್ತು.

ಪ್ರಸಕ್ತ ಇಂದು ನಡೆದ ತೀರ್ಮಾನದಲ್ಲಿ ಶೇಕಡಾ 100 ದಷ್ಟು ನೇರ ವಿದೇಶಿ ಹೂಡಿಕೆಗೆ ಅವಕಾಶ ನೀಡಿದೆ. ಅದಾಗ್ಯೂ ಚೀನಾ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳಿಗೆ ಹೂಡಿಕೆಗೆ ಈ ಆದೇಶ ಅನ್ವಯವಾಗುವುದಿಲ್ಲ. ಏಪ್ರಿಲ್ 2020 ರಲ್ಲಿ ದೇಶಿಯ ವ್ಯವಹಾರಗಳ ಮೇಲೆ ಯಾವುದೇ ಪ್ರತಿಕೂಲ ಸ್ವಾದೀನವನ್ನು ತಡೆಯಲು ಭಾರತವು ಭೂ ಗಡಿಯನ್ನು ಹೊಂದಿಕೊಂಡಿರುವ ದೇಶಗಳಿಗೆ ಭಾರತದಲ್ಲಿ ನೇರ ಹೂಡಿಕೆಗೆ ಸರ್ಕಾರ ನಿಯಮಗಳನ್ನು ವಿಧಿಸಿದೆ.



Join Whatsapp