ಫೆಲೆಸ್ತೀನ್ ನಿರಾಶ್ರಿತ ಏಜೆನ್ಸಿಗೆ ವಿಶ್ವಸಂಸ್ಥೆ ನೀಡುವ ಆರ್ಥಿಕ ನೆರವು ಮರುಸ್ಥಾಪಿಸಿದ ಬೈಡನ್

Prasthutha|

ವಾಷಿಂಗ್ಟನ್: ವಿಶ್ವಸಂಸ್ಥೆಯು ಫೆಲೆಸ್ತೀನಿಯನ್ ನಿರಾಶ್ರಿತ ಏಜೆನ್ಸಿಗೆ ನೀಡುವ ಆರ್ಥಿಕ ನೆರವು ಪುನಃಸ್ಥಾಪಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. 2018 ರಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಡೆಹಿಡಿದಿದ್ದ ನಿಧಿಯನ್ನು ಬೈಡನ್ ಪುನಃ ಸ್ಥಾಪಿಸಿದ್ದಾರೆ.

- Advertisement -

ಯುಎನ್ ರಿಲೀಫ್ ಆ್ಯಂಡ್ ವರ್ಕ್ ಏಜೆನ್ಸಿ (ಯುಎನ್‌ಆರ್‌ಡಬ್ಲ್ಯೂಎ) ಮೊದಲ ಕಂತಿನಲ್ಲಿ 15 ಕೋಟಿ ಡಾಲರ್ ಪ್ಯಾಲೇಸ್ತೀನ್ ನಿರಾಶ್ರಿತರ ಏಜೆನ್ಸಿಗೆ ಹಂಚಲಿದೆ ಎಂದು ಯು.ಎಸ್. ಸ್ಟೇಟ್ ಸೆಕ್ರೆಟರಿ ಆ್ಯಂಟನಿ ಬ್ಲಿಂಕೆನ್ ತಿಳಿಸಿದ್ದಾರೆ. ವೆಸ್ಟ್ ಬ್ಯಾಂಕ್ ಮತ್ತು ಗಾಝಾದ ಜೊತೆಗೆ ಲೆಬನಾನ್, ಜೋರ್ಡಾನ್ ಮತ್ತು ಇತರೆಡೆಗಳಲ್ಲಿ ವಾಸಿಸುತ್ತಿರುವ 57 ಲಕ್ಷ ಫೆಲೆಸ್ತೀನಿಯರಿಗೆ ಯುಎನ್‌ಆರ್‌ಡಬ್ಲ್ಯೂಎ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಒಳಗೊಂಡಂತೆ ಹಣಕಾಸಿನ ನೆರವು ನೀಡಲಿದೆ.

ನಿರಾಶ್ರಿತರಿಗೆ ನೆರವು ಪುನರಾರಂಭಿಸುವ ಅಮೇರಿಕಾದ ಈ ನಿರ್ಧಾರವನ್ನು ಏಜೆನ್ಸಿ ಕಮಿಷನರ್ ಜನರಲ್ ಫಿಲಿಪ್ ಲಝಾರಿನಿ ಸ್ವಾಗತಿಸಿದ್ದಾರೆ. 15 ಕೋಟಿಯ ಜೊತೆಗೆ ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಗಾಝಾದ ಫೆಲೆಸ್ತೀನಿಯರಿಗೆ ವಸತಿಗಳ ಪುನರ್ನಿರ್ಮಾಣ ಸಹಾಯಕ್ಕಾಗಿ 7.5 ಕೋಟಿ ಮತ್ತು ಶಾಂತಿಪಾಲನಾ ಯೋಜನೆಗಳಲ್ಲಿ 1ಕೋಟಿ ಡಾಲರ್ ನೀಡಲು ಅಮೇರಿಕಾ ಯೋಜನೆ ರೂಪಿಸಿದೆ ಎಂದು ಬ್ಲಿಂಕೆನ್ ತಿಳಿಸಿದ್ದಾರೆ.

- Advertisement -

ಬೈಡೆನ್ ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಫೆಲೆಸ್ತೀನಿಯರೊಂದಿಗೆ ಸಂಬಂಧವನ್ನು ಪ್ರಾರಂಭಿಸುವುದಾಗಿ  ಘೋಷಿಸಿದ್ದರು.



Join Whatsapp