ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿರುವ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್, ತಮ್ಮ ವೈಯಕ್ತಿಕ ಬದುಕು ನೆನೆದು ಕಣ್ಣೀರು ಹಾಕಿದ್ದಾರೆ.
ವಾರಾಂತ್ಯದ ಮುನ್ನಾ ವಂದನಾ ಭಾಷಣ ಮಾಡಿದ ಬೈಡನ್, ಅಮೆರಿಕದಲ್ಲಿ ಕೊರೊನ ವೈರಸ್ ಪ್ರಕರಣಗಳಿಂದ ಮೃತರಾದವರ ಕುಟುಂಬ ಸದಸ್ಯರಿಗೆ ಸಾಂತ್ವನ ನುಡಿಯುತ್ತಾ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಸ್ಮರಿಸಿದರು.
1972ರ ಕ್ರಿಸ್ ಮಸ್ ಸಂದರ್ಭದಲ್ಲಿ ನಡೆದ ಕಾರು ಅಪಘಾತದಲ್ಲಿ ತಮ್ಮ ಪತ್ನಿ, ಪುತ್ರಿ ತೀರಿಕೊಂಡರು. 2015ರಲ್ಲಿ ಪುತ್ರ ಬ್ರೈನ್ ಕ್ಯಾನ್ಸರ್ ನಿಂದ ಸಾವಿಗೀಡಾದರು. ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು, ದುಃಖದ ಅನುಭವ ತಮಗೆ ಚೆನ್ನಾಗಿ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಮುಂದಿನ ಬಗ್ಗೆ ಚಿಂತೆ ಮಾಡುವುದಕ್ಕೂ ಕಷ್ಟವಾಗುತ್ತಿರುತ್ತದೆ ಎಂದು ಹೇಳುವ ಮೂಲಕ ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ನುಡಿದರು. ಅಲ್ಲದೆ, ತಮ್ಮವರನ್ನು ನೆನೆದು ಬಾವುಕರಾದರು.