ಬೀದರ್‌: ಅತ್ಯಾಚಾರಿ ಅಪರಾಧಿ ಆಸಾರಾಮ ಬಾಪು ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Prasthutha|

ಬೀದರ್: ಅತ್ಯಾಚಾರ ಅಪರಾಧಿ ಆಸಾರಾಮ ಬಾಪು ಬಿಡುಗಡೆಗೆ ಆಗ್ರಹಿಸಿ ಯೋಗ ವೇದಾಂತ ಸೇವಾ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ನಗರದ ಗಣೇಶ ಮೈದಾನದಿಂದ ಮೋಹನ್‌ ಮಾರುಕಟ್ಟೆ, ಹರಳಯ್ಯಾ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ತನಕ ರ್‍ಯಾಲಿಯನ್ನೂ ನಡೆಸಿದ್ದಾರೆ.

- Advertisement -

ರ್‍ಯಾಲಿಯುದ್ದಕ್ಕೂ ಬಾಪು ಪರ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ರಾಷ್ಟ್ರಪತಿ, ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು.

ಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಿ ಬಾಪು ಅವರನ್ನು ಬಂಧಿಸಿ ಕಾರಾಗೃಹದಲ್ಲಿ ಇಟ್ಟಿರುವುದು ಖಂಡನಾರ್ಹ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಸನಾತನ ಹಿಂದೂ ಧರ್ಮವನ್ನು ಜಾಗೃತಗೊಳಿಸುವ ಕೆಲಸ ಅವರು ಮಾಡಿದ್ದಾರೆ. ಮತಾಂತರ ತಡೆದು ಹಿಂದೂ ಧರ್ಮಕ್ಕೆ ವಾಪಸ್‌ ಕರೆತರುವ ಕೆಲಸ ಮಾಡಿದ್ದಾರೆ. ಅನೇಕರಿಗೆ ದೀಕ್ಷೆ ನೀಡಿದ್ದಾರೆ ಎಂದು‌ ಆಸಾರಾಮ ಬಾಪುವನ್ನು ಪ್ರಶಂಸಿಸಿದರು.

- Advertisement -

ಸರ್ಕಾರ ಭಯೋತ್ಪಾದಕರನ್ನು, ದೇಶದ್ರೊಹಿಗಳನ್ನು, ಸಮಾಜಘಾತುಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತದೆ. ನಿರಪರಾಧಿ ಬಾಪು ಅವರನ್ನು ಬಿಡುಗಡೆಗೊಳಿಸದೆ ಅನ್ಯಾಯ ಮಾಡುತ್ತಿದೆ. ಭಕ್ತರ ನೋವು ಅರಿತು ಸ್ಪಂದಿಸಬೇಕು. ಬಾಪು ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಾಗಾಗಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಗುಜರಾತ್‌ನ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಅಹಮದಾಬಾದ್‌ನ ತನ್ನ ಆಶ್ರಮದಲ್ಲಿ ಶಿಷ್ಯೆಯೊಬ್ಬಳನ್ನು ತನ್ನ ಕಾಮಕ್ಕೆ ಬಲಿಯಾಗಿಸಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿ ಆತನನ್ನು ದೋಷಿ ಎಂದು ಘೋಷಿಸಿ 2013ರಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದೆ.

2013ರಲ್ಲಿ ಸಂತ್ರಸ್ತೆ ಅಸಾರಾಂ ಬಾಪು ವಿರುದ್ಧ ದೂರು ದಾಖಲಿಸಿದ್ದರು. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ, ಬಲಪ್ರಯೋಗ ಸೇರಿದಂತೆ ಹಲವು ಅಪರಾಧಗಳಲ್ಲಿ ಅಸಾರಾಂ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ..

ಅಹಮದಾಬಾದ್ ಬಳಿಯ ಮೊಟೆರಾದಲ್ಲಿರುವ ಆಶ್ರಮದಲ್ಲಿ 2001ರಿಂದ 2006ರವರೆಗೆ ಆಸಾರಾಂ ಬಾಪು ಹಲವು ಸಂದರ್ಭಗಳಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಅವರ ಮಾಜಿ ಶಿಷ್ಯೆ, ಅಪ್ರಾಪ್ತೆ 2013ರಲ್ಲಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು.ಇದು ಅಸಾರಾಂ ವಿರುದ್ದ ಎರಡನೇ ಅತ್ಯಾಚಾರ ಪ್ರಕರಣವಾಗಿತ್ತು



Join Whatsapp