ನನಗೆ ಟಿಕೆಟ್‌ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ: ಸದಾನಂದ ಗೌಡ

Prasthutha|

ಬೆಂಗಳೂರು: ನನಗೆ ಟಿಕೆಟ್‌ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಸದಾನಂದ ಗೌಡ ಬಿಜೆಪಿ ಹೈಕಮಾಂಡಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಒಕ್ಕಲಿಗರು ಹಾಗೂ ಉಳಿದ ಸಮುದಾಯದವರ ಸಹಮತ ಪಡೆದು ನಾನು ಗೆದ್ದಿದ್ದೇನೆ. ಮಾಜಿ ಸಿಎಂ ಆಗಿ, ಕೇಂದ್ರದ ಮಾಜಿ ಸಚಿವನಾಗಿ ನನಗೆ ಟಿಕೆಟ್‌ ನೀಡದೆ ಇದ್ದರೆ ಆಗುವ ಪರಿಣಾಮದ ಬಗ್ಗೆ ನಾನು ಹೇಳುವುದಕ್ಕಿಂತಲೂ ಪಕ್ಷ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸದಾನಂದ ಗೌಡ ಎಚ್ಚರಿಸಿದ್ದಾರೆ.

- Advertisement -

ನಾನು ನೇರವಾಗಿದ್ದೇನೆ. ಒತ್ತಾಯಕ್ಕೆ ಒಪ್ಪಿಕೊಂಡು ಮತ್ತೆ ಬಂದಿದ್ದೇನೆ. ಅದನ್ನು ಕೇಂದ್ರದವರು ಗೌರವಿಸುವ ವಿಶ್ವಾಸವಿದೆ. ಬೆಂಗಳೂರು ಉತ್ತರ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ ಎಂದು ಸೂಚ್ಯವಾಗಿ ಹೇಳಿದ್ದಾರೆ.

ನಾವು ಪಕ್ಷದಲ್ಲಿ ಈ ರೀತಿ ಗೊಂದಲ ಮಾಡಿಕೊಂಡರೆ ಖಂಡಿತ ಹಿನ್ನಡೆಯಾಗುತ್ತದೆ.ನನಗೆ ಟಿಕೆಟ್‌ ಕೊಡದೆ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ. ಒಕ್ಕಲಿಗ ಸಂಸದರು ಇರುವ ಕ್ಷೇತ್ರಗಳಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ನನಗೆ ನೂರಾರು ಜನರು ಈ ವಿಚಾರ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

- Advertisement -

ರಾಜವಂಶಸ್ಥ ಯದುವೀರ್‌ ಅವರನ್ನು ಪಕ್ಷಕ್ಕೆ ಕರೆತರಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರಿನಲ್ಲಿ ಇದು ಹೊಸದಲ್ಲ. ಬೇರೆ ರಾಜ್ಯಗಳಲ್ಲೂ ರಾಜವಂಶಸ್ಥರನ್ನು ಕರೆ ತಂದಿದ್ದಾರೆ. ಆದರೆ ಪ್ರತಾಪಸಿಂಹ ಹಾಗೂ ಅನಂತ ಕುಮಾರ್‌ ಹೆಗಡೆಯವರಿಗೆ ಅವರ ಮಾತುಗಳೇ ಜಾಸ್ತಿಯಾಯಿತು ಎಂದರು.
ಬೆಂಗಳೂರು ಉತ್ತರಕ್ಕೆ ನೂರಕ್ಕೆ ನೂರು ನನ್ನದೊಂದೇ ಹೆಸರಿತ್ತು. ಕಾರ್ಯಕರ್ತರು ಒಮ್ಮತದ ಅಭಿಪ್ರಾಯ ಕೊಟ್ಟ ಬಳಿಕ ಕೇಂದ್ರದವರು ಅದಕ್ಕೆ ಮಣೆ ಹಾಕಬೇಕು. ಇಲ್ಲವಾದರೆ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.



Join Whatsapp