ಇಂದಿನಿಂದ ಬೀದರ್- ಬೆಂಗಳೂರು ವಿಮಾನ ಹಾರಾಟ ಆರಂಭ

Prasthutha|

ಬೆಂಗಳೂರು: ಇಂದಿನಿಂದ ಬೀದರ್- ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಸಂಚಾರ ಆರಂಭವಾಗಲಿದೆ. ವಿಮಾನ ಸೇವೆಗೆ ಇಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

- Advertisement -

ವಾರದಲ್ಲಿ ನಾಲ್ಕು ದಿನಗಳ ಕಾಲ ವಿಮಾನ ಯಾನ ಸೇವೆ ಪ್ರಯಾಣಿಕರಿಗೆ ದೊರಕಲಿದ್ದು, ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೀದರ್-ಬೆಂಗಳೂರು ವಿಮಾನ ಯಾನ ಲಭ್ಯವಿರುತ್ತದೆ. ಸ್ಟಾರ್ ಏರ್ ಸಂಸ್ಥೆಯು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಈ ಸೇವೆಯನ್ನು ಒದಗಿಸಲಿದೆ.

ವಿಮಾನದಲ್ಲಿ ಒಟ್ಟು 50 ಜನ ಪ್ರಯಾಣಿಸಲು ಸಾಧ್ಯವಿದ್ದು, ಪ್ರಯಾಣ ವೆಚ್ಚ2599 ರೂ.ಗೆ, ಸುಮಾರು 50 ನಿಮಿಷಗಳಲ್ಲಿ ಬೀದರ್’ನಿಂದ ಬೆಂಗಳೂರಿಗೆ ವಿಮಾನ ತಲುಪಲಿದೆ. ಬೀದರ್ ಜಿಲ್ಲಾಡಳಿತ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ, ವಿಮಾನ ಸೇವೆ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು ಮೊದಲು ಟಿಕೆಟ್ ಮಾಡಿದವರು ಅತಿಥಿಯಿಂದ ಪ್ರಶಸ್ತಿಯನ್ನೂ ಪಡೆಯಲಿದ್ದಾರೆ.



Join Whatsapp