ಮಕ್ಕಳೊಂದಿಗೆ ರೈಲಿನ ಮುಂದೆ ಜಿಗಿದು ಮಹಿಳೆ ಆತ್ಮಹತ್ಯೆ !

Prasthutha|

ಹೊಸದಿಲ್ಲಿ: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ  ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಹೋಲಂಬಿ ಕಲನ್ ರೈಲು ನಿಲ್ದಾಣದಲ್ಲಿ ನಡೆದಿದೆ.

- Advertisement -

ಮೃತ ಮಹಿಳೆಯ ವಯಸ್ಸು 30 ರ ಆಸುಪಾಸಿನಲ್ಲಿದ್ದು, ಮಕ್ಕಳು 5 ಮತ್ತು 10 ವರ್ಷದವರಾಗಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಮಹಿಳೆ ಉದ್ದೇಶಪೂರ್ವಕವಾಗಿಯೇ   ಹಳಿ ಮೇಲೆ ಧುಮುಕಿದ್ಧಾರೆ ಎಂಬುದು ತಿಳಿದುಬಂದಿದೆ. ರೈಲು 100 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದುದರಿಂದ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೆ ಭದ್ರತಾ ನಿಯಂತ್ರಣ ಕೊಠಡಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮಗೆ ಕರೆ ಬಂದಿತ್ತು. ತನಿಖಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದಾಗ ಹಳಿ ಮೇಲೆ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ’ ಎಂದು ರೈಲ್ವೆ ಡಿಸಿಪಿ ಹರೇಂದರ್ ಕೆ ಸಿಂಗ್ ತಿಳಿಸಿದ್ದಾರೆ.

- Advertisement -

ತಾಯಿ ಮತ್ತು ಮಕ್ಕಳು ಅಮೃತಸರ ಇಂಟರ್‌ಸಿಟಿ ರೈಲಿನ ಮುಂಭಾಗ ಜಿಗಿದಿದ್ದಾರೆ. ರೈಲು ಅವರ ಮೇಲೆ ಹರಿದಿದೆ. ಅವರ ಗುರುತು ಪತ್ತೆಮಾಡುವ ಪ್ರಯತ್ನ ನಡೆದಿದ್ದು,  ಮೃತದೇಹಗಳನ್ನು ಸಬ್ಜಿ ಮಂಡಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.



Join Whatsapp