ಯೂಟ್ಯೂಬ್ ವೀವರ್ಸ್ ಕಡಿಮೆಯಾದರು ಎಂದು ಆತ್ಮಹತ್ಯೆ ಮಾಡಿದ ಯುವಕ!

Prasthutha|

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಯೂಟ್ಯೂಬ್ ನಲ್ಲಿ ತನ್ನ ಚಾನೆಲ್ ಗೆ ವೀಕ್ಷಕರು ಕಡಿಮೆಯಾದರು ಎಂಬ ಒಂದೇ ಕಾರಣಕ್ಕೆ 23 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

- Advertisement -

ಹೈದರಾಬಾದ್ ಐಐಟಿಎಂ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ವಾಲಿಯರ್ ಮೂಲದ ವಿದ್ಯಾರ್ಥಿ ಇಂದು ವಸತಿ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಬಿದ್ದ ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಪಟ್ಟರೂ ಆತ ಸ್ಥಳದಲ್ಲೇ ಸಾವನ್ನಪ್ಪಿದನು ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಯು ಬರೆದಿರುವ ಸೂಸೈಡ್ ನೋಟ್ನಲ್ಲಿ, ಯೂಟ್ಯೂಬ್ ನಲ್ಲಿ ತನ್ನ ಚಾನೆಲ್ ಗೆ ವೀಕ್ಷಕರು ಕಡಿಮೆಯಾಗಿದ್ದಾರೆ ಮತ್ತು ಅವರ ಪೋಷಕರು ತಮ್ಮ ವೃತ್ತಿಜೀವನದಲ್ಲಿ ತನಗೆ ಮಾರ್ಗದರ್ಶನ ನೀಡುತ್ತಿಲ್ಲ, ಇದರಿಂದಾಗಿ ತಾನು ತೊಂದರೆಗೀಡಾದೆ ಎಂದು ಉಲ್ಲೇಖಿಸಿದ್ದಾನೆ ಎಂದು ಸೈದಾಬಾದ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಮೃತ ವಿದ್ಯಾರ್ಥಿ ಅಪಾರ್ಟ್ಮೆಂಟ್ನಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದ. ಕೋರ್ಸ್ಗಾಗಿ ಆನ್ಲೈನ್ ತರಗತಿಗಳ ಮೂಲಕ ಅಧ್ಯಯನ ಮಾಡುತ್ತಿದ್ದ. ವಿದ್ಯಾರ್ಥಿಯು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ-ಗೇಮ್ಗಳ ವಿಷಯವನ್ನು ಅಪ್ಲೋಡ್ ಮಾಡುತ್ತಿದ್ದ. ಆದರೆ ಇತ್ತೀಚೆಗೆ ವೀವ್ಸ್ ಕಡಿಮೆಯಾಗುತ್ತಿದ್ದದ್ದೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ

Join Whatsapp