ಶೂಟಿಂಗ್ ಗೆ ತೆರಳಿದ್ದ ಭೋಜಪುರಿ ನಟಿ ಅನುಮಾನಾಸ್ಪದ ಸಾವು

Prasthutha|

ವಾರಣಾಸಿ: ಭೂಜ್​ಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ದುಬೆ ಮೃತದೇಹ ವಾರಣಾಸಿಯ ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಟಿಯು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ನಟಿ ಆಕಾಂಕ್ಷಾ ದುಬೆ ಅವರು ನಾಯಕ್ ಹೆಸರಿನ ಭೋಜ್​ಪುರಿ ಸಿನಿಮಾದ ಚಿತ್ರೀಕರಣಕ್ಕಾಗಿ ವಾರಣಾಸಿಗೆ ತೆರಳಿದ್ದರು. ಈ ವೇಳೆ ಅವರು ಸಾರಾನಾಥ್ ಹೋಟೆಲ್​ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ಕೋಣೆಯ ಒಳಗೆ ಹೋದಾಗ ನಟಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಟಿಯ ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

ಭೊಜ್​ಪುರಿ ಚಿತ್ರರಂಗದಲ್ಲಿ ಸಪ್ನೋಂಕಿ ರಾಣಿ (ಕನಸಿನ ರಾಣಿ) ಎಂದೇ ಹೆಸರು ಗಳಿಸಿದ್ದ ನಟಿ ಆಕಾಂಕ್ಷಾ ದುಬೆ, ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

- Advertisement -