ಭೀಮಾ ಕೋರೆಗಾಂವ್ ಪ್ರಕರಣ: ವರವರರಾವ್ ಗೆ ತಾತ್ಕಾಲಿಕ ಜಾಮೀನು ವಿಸ್ತರಣೆ, ಶಾಶ್ವತ ಜಾಮೀನು ನಿರಾಕರಣೆ

Prasthutha|

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ತೆಲುಗು ಕವಿ ವರವರ ರಾವ್ ಅವರಿಗೆ ಶಾಶ್ವತ ಜಾಮೀನು ನೀಡಲು ನಿರಾಕರಿಸಿರುವ ಬಾಂಬೆ ಹೈಕೋರ್ಟ್, ಮೂರು ತಿಂಗಳ ಅವಧಿಗೆ ತಾತ್ಕಾಲಿಕ ಜಾಮೀನು ವಿಸ್ತರಣೆ ಮಾಡಿದೆ.

- Advertisement -

ಶಾಶ್ವತ ಜಾಮೀನು ನೀಡಿ, ತೆಲಂಗಾಣಕ್ಕೆ ಮರಳಲು ಅನುಮತಿಸುವಂತೆ ವರವರ ರಾವ್ ಅವರು ಬಾಂಬೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ತೆಲಂಗಾಣದಲ್ಲೇ ನೆಲೆಸಲು ಅವಕಾಶ ಕೋರಿದ್ದನ್ನು ಕೂಡ ನ್ಯಾಯಾಲಯ ಮಾನ್ಯ ಮಾಡಿಲ್ಲ.

ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಜಿ.ಎ.ಸನಪ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

- Advertisement -

ಇದೇ ವರ್ಷದ ಫೆಬ್ರವರಿ 1ರಂದು ಹೈಕೋರ್ಟ್, 82 ವರ್ಷ ಪ್ರಾಯದ ವರ ವರರಾವ್ ಅವರಿಗೆ 6 ತಿಂಗಳ ಜಾಮೀನು ನೀಡಿತ್ತು. ಆದರೆ ಮುಂಬೈ ಬಿಟ್ಟು ಹೋಗದಂತೆ ಷರತ್ತು ವಿಧಿಸಿತ್ತು.



Join Whatsapp