ಎಂ.ಬಸವಪುನ್ನಯ್ಯ ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ಮೇರು ವ್ಯಕ್ತಿ: ಪ್ರಗತಿಪರ ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ

Prasthutha|

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರರ, ತೆಲಂಗಾಣ ರೈತ ಹೋರಾಟದ ರೂವಾರಿಯಾಗಿದ್ದ ಎಂ.ಬಸವಪುನ್ನಯ್ಯ ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ನಿರೂಪಣೆಯ ಮೇರು ವ್ಯಕ್ತಿ ಎಂದು ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿ ಅಭಿಪ್ರಾಯ ಪಟ್ಟರು. ಬಸವಪುನ್ನಯ್ಯರವರ 30ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಂಚಾಡಿ ಮಾತನಾಡಿದರು.

- Advertisement -

ಎಂ.ಬಸವಪುನ್ನಯ್ಯ CPIM ಪಕ್ಷ ರೂಪೀಕರಣದ ನವರತ್ನಗಳೆಂಬ 9 ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಕಮ್ಯುನಿಸ್ಟ್ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು, 14 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಪ್ರಖರ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಲಿತ ಹಕ್ಕುಗಳ ಸಮಿತಿಯ ನಗರಾಧ್ಯಕ್ಷರಾದ ರಾಧಾಕ್ರಷ್ಣ ಬೊಂಡಂತಿಲ, ಬ್ರಿಟೀಷ್ ಸಾಮ್ಯಾಜ್ಯಶಾಹಿಗಳ ವಿರುದ್ದದ ಹೋರಾಟದಲ್ಲಿ ಸಕ್ರೀಯ ಪಾತ್ರ ವಹಿಸಿದ್ದ ಎಂ.ಬಸವಪುನ್ನಯ್ಯರವರು ರೈತ ಕಾರ್ಮಿಕರ ಹೋರಾಟವನ್ನು ಸ್ವಾತಂತ್ರ್ಯ ಚಳುವಳಿಯೊಂದಿಗೆ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

- Advertisement -

ಕಾರ್ಯಕ್ರಮವನ್ನು ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Join Whatsapp