ನೂಪುರ್ ಶರ್ಮಾಗೆ ಬೆದರಿಕೆ ಹಾಕಿದ ಭೀಮ್ ಸೇನಾ ಮುಖ್ಯಸ್ಥನ ಬಂಧನ

Prasthutha|

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದ ಭೀಮ್ ಸೇನಾ ಮುಖ್ಯಸ್ಥ ನವಾಬ್ ಸತ್ಪಾಲ್ ತನ್ವರ್ ಅವರನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.

- Advertisement -

ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಪ್ರಚೋದನೆ, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದ ಕೆಲವು ದಿನಗಳ ನಂತರ, ವಿಶೇಷ ಸೆಲ್ ನ ಸೈಬರ್ ಸೆಲ್ ಘಟಕವು ತನ್ವರ್ ಅವರನ್ನು ಗುರುವಾರ ಅವರ ನಿವಾಸದಿಂದ ಬಂಧಿಸಿದೆ ಎಂದು ಗುರ್ಗಾಂವ್ ಪೊಲೀಸರು ಹೇಳಿದ್ದಾರೆ.

ಬಿಜೆಪಿ ಯುವ ಘಟಕದ ಅಧ್ಯಕ್ಷೆ ಸರ್ವಪ್ರಿಯಾ ತ್ಯಾಗಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

- Advertisement -

ತನ್ವರ್ ಫೇಸ್ಬುಕ್ ವೀಡಿಯೊದಲ್ಲಿ ಶರ್ಮಾಗೆ “1 ಕೋಟಿ ರೂ.ಗಳ ಬಹುಮಾನ” ನೀಡಿದ್ದಾರೆ ಮತ್ತು ಬೆದರಿಕೆಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp