ನಾಳೆ ಭಾರತ ಬಂದ್ : ಮೋದಿ ಸರಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ 15ಕ್ಕೂ ಹೆಚ್ಚು ಪಕ್ಷಗಳ ಬೆಂಬಲ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಕೃಷಿ ನೀತಿ ಕಾನೂನುಗಳ ವಿರೋಧಿಸಿ ನಾಳೆ(ಡಿ.8) ರೈತರು ನೀಡಿರುವ ಭಾರತ ಬಂದ್ ಕರೆಗೆ ಟಿ.ಆರ್.ಎಸ್., ಶಿವಸೇನೆ, ಆರ್.ಜೆ.ಡಿ., ಬಿಎಸ್ಪಿ, ಎನ್ಸಿಪಿ, ಡಿಎಂಕೆ ಸೇರಿ 15ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಸೂಚಿಸಿವೆ.

- Advertisement -

ಪ್ರಧಾನಿ ಮೋದಿ ಸರಕಾರದ ಮೂರು ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ತೀವ್ರ ಹೋರಾಟವನ್ನು ದೆಹಲಿಯಲ್ಲಿ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಅದ್ಯಾವುದೂ ಯಶಸ್ವಿಯಾಗಿರಲಿಲ್ಲ. ಹೀಗಾಗಿ ರೈತರು ಮಂಗಳವಾರ ಭಾರತ ಬಂದ್ ಗೆ ಕರೆ ನೀಡಿದ್ದಾರೆ.

ದೇಶಾದ್ಯಂತ ಎಲ್ಲಾ ಹೆದ್ದಾರಿ ಟೋಲ್ ಗೇಟ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಡಿ.8ರಂದು ಮುಷ್ಕರದ ಭಾಗವಾಗಿ ಸರಕಾರವು ಟೋಲ್ ಸಂಗ್ರಹಿಸಲು ಬಿಡುವುದಿಲ್ಲ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

- Advertisement -

ನಮ್ಮ ಚಳವಳಿಗೆ ಹೆಚ್ಚಿನ ಜನರು ಸೇರಿಕೊಳ್ಳಲಿದ್ದಾರೆ ಎಂದು ಪ್ರತಿಭಟನಾ ಗುಂಪುಗಳ ಮುಖಂಡ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ.



Join Whatsapp