ಧರ್ಮಗಳ ನಡುವೆ ಕೋಮು ವಿಷ ಬೀಜ ಬಿತ್ತಿದ್ದೇ ಭರತ್ ಶೆಟ್ಟಿ ಸಾಧನೆ: ಇನಾಯತ್ ಅಲಿ

Prasthutha|

►ಮಂಗಳೂರು ಉತ್ತರದಲ್ಲಿ ದಿನದಂದ ದಿನಕ್ಕೆ ಹೆಚ್ಚುತ್ತಿರುವ ಕಾಂಗ್ರೆಸ್ ಪರ ಮತದಾರರ ಒಲವು

- Advertisement -

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಶನಿವಾರದಂದು ಇಡ್ಯಾ, ಮುಂಚೂರು, ಚೊಕ್ಕಬೆಟ್ಟು ಪ್ರದೇಶದಲ್ಲಿ ಮತಯಾಚನೆ ನಡೆಸಿದರು, ನಂತರ ಗುರುಪುರ ಹಾಗೂ ಅಡ್ಡೂರು ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.

“ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರವನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ‌ ಬಾರಿ ಮತದಾರರು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ. ಭರತ್ ಶೆಟ್ಟಿ ಅವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡಲು ಏನೂ ಇಲ್ಲ. ಕೋಮು ಸಾಮರಸ್ಯವನ್ನು ಕೆಡವಿದ್ದೇ ಭರತ್ ಶೆಟ್ಟಿ ಸಾಧನೆ. ಧರ್ಮದ ಆಧಾರದಲ್ಲಿ ಜನರ ಭಾವನೆಗಳಿಗೆ ವಿಷ ಬೀಜ ಬಿತ್ತುವ ಕೆಟ್ಟ ರಾಜಕೀಯ ಭರತ್ ಶೆಟ್ಟಿ ಮಾಡಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಜನರು ಇದಕ್ಕೆ ಈ ಬಾರಿ ಸ್ಪಷ್ಟ ಉತ್ತರ ನೀಡುತ್ತಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ನೀಡಿದೆ. ಸರ್ವರ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಧ್ಯೇಯ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರುತ್ತಿರುವುದು ನಮಗೆ ಶಕ್ತಿ ನೀಡಿದೆ” ಎಂದು ಸಭೆಯನ್ನುದ್ದೇಶಿಸಿ ಇನಾಯತ್ ಅಲಿ ಅವರು ಮಾತನಾಡಿದರು.

- Advertisement -

ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.