ರಾಜ್ಯಕ್ಕೆ ಮತ್ತೊಮ್ಮೆ ಶಾಕ್ | ಕೋವ್ಯಾಕ್ಸಿನ್‌ ಪೂರೈಕೆಯ 14 ರಾಜ್ಯಗಳ ಪಟ್ಟಿಯಿಂದ ಕರ್ನಾಟಕವನ್ನು ಕೈಬಿಟ್ಟ ಕೇಂದ್ರ!

Prasthutha|

ಹೊಸದಿಲ್ಲಿ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದ ಲಸಿಕೆಯ ಬೇಡಿಕೆಯೂ ವಿಪರೀತವಾಗುತ್ತಿದೆ. ಈ ನಡುವೆ ಕೋವಿಡ್ ನಿಂದ ತತ್ತರಿಸಿ ಹೋಗಿರುವ 14 ರಾಜ್ಯಗಳಿಗೆ ಮೇ 1ರಿಂದ ಕೋವ್ಯಾಕ್ಸಿನ್‌ ಲಸಿಕೆಯ ಪೂರೈಕೆಯನ್ನು ಪ್ರಾರಂಭಿಸಲಾಗಿದೆ ಎಂದು ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ. ಆದರೆ ಕೊರೋನಾ ಹೆಚ್ಚಾಗಿರುವ ಕರ್ನಾಟಕದಲ್ಲಿ ಲಸಿಕೆಗೆ ಕೊರತೆ ಇದ್ದರೂ, 14 ರಾಜ್ಯಗಳ ಪಟ್ಟಿಯಿಂದ ಕರ್ನಾಟಕವನ್ನೇ ಕೈಬಿಡಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಲಸಿಕೆ ಕೊರತೆ ಮುಂದುವರಿಯಲಿದೆ.

- Advertisement -


ಕೇಂದ್ರ ಸರ್ಕಾರ ಲಸಿಕೆ ಹಂಚಲು ನೀಡಿದ್ದ ಪಟ್ಟಿಯನುಸಾರ 14 ರಾಜ್ಯಗಳಿಗೆ ಮೇ 1ರಿಂದಲೇ ಲಸಿಕೆ ಪೂರೈಕೆ ಆರಂಭಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಲಸಿಕೆಗೆ ಬೇಡಿಕೆ ಸ್ವೀಕರಿಸಲಾಗಿದೆ. ಲಸಿಕೆಯ ಲಭ್ಯತೆಯನ್ನು ನೋಡಿಕೊಂಡು ರಾಜ್ಯಗಳಿಗೆ ನೇರ ಪೂರೈಕೆ ಮಾಡಲಾಗುತ್ತದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ತಿಳಿಸಿದ್ದಾರೆ.

ಈ ವೇಳೆ ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗುಜರಾತ್‌, ಜಮ್ಮು-ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಿಗೆ ಮೇ 1ರಿಂದ ಲಸಿಕೆ ಪೂರೈಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


Join Whatsapp