ತ್ರಿವರ್ಣ ಧ್ವಜ ಹೊದಿಸಿದ ಕಂಬದ ಮೇಲೆ ಭಗವಧ್ವಜ; ಬಿಜೆಪಿ ಕಾರ್ಯಕರ್ತರ ಪುಂಡಾಟಿಕೆ

Prasthutha|

ಕೊಪ್ಪಳ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತ್ರಿವರ್ಣ ಧ್ವಜ ಹೊದಿಸಲಾಗಿರುವ ಕಂಬದ ಮೇಲೆ ಭಗವಧ್ವಜ ಹಾರಿಸಿದ ಘಟನೆ ನಡೆದಿದ್ದು,  ಭಾರಿ ವಿವಾದಕ್ಕೆ ಕಾರಣವಾಗಿದೆ.

- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭ ಮಾಡಿದ ಬಿಜೆಪಿ ಕಾರ್ಯಕರ್ತರು  ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.

ಬಸವೇಶ್ವರ ವೃತ್ತದ ಪ್ರಮುಖ ವೃತ್ತಗಳನ್ನು ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣದಲ್ಲಿ ಅಲಂಕರಿಸಲಾಗಿದೆ. ಆದರೆ ದೇಶದ ಧ್ವಜದ ಘನತೆ ಬಗ್ಗೆ ಕಿಂಚಿತ್ತೂ ಗೌರವ ಕೊಡದೆ, ಬೇಕಾಬಿಟ್ಟಿಯಾಗಿ ಧ್ವಜವನ್ನು ಬಳಕೆ ಮಾಡಿರುವುದು ಕಂಡುಬಂದಿದೆ. ಭಗವಧ್ವಜದ ಕಂಬಕ್ಕೆ ತ್ರಿವರ್ಣ ಧ್ವಜವನ್ನು ಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಬಿಜೆಪಿಯವರಿಗೆ ಧರ್ಮವೇ ಮುಖ್ಯವಾಗಿದ್ದು ದೇಶ ಭಕ್ತಿ ಕೇವಲ ತೋರಿಕೆಗೆ ಮಾತ್ರ. ದೇಶವೇ ಸಂಭ್ರಮಿಸುವ ಈ ಸಂದರ್ಭದಲ್ಲಿ ಈ ರೀತಿ ಧರ್ಮ ರಾಜಕಾರಣ ಮಾಡುತ್ತಿರುವುದು ಸರಿ ಅಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Join Whatsapp