ಬ್ರಾಹ್ಮಣರ ಬಗ್ಗೆ ಮಾತಾಡಿದರೆ ಹುಷಾರ್ : ಸಿದ್ದರಾಮಯ್ಯಗೆ ವಾರ್ನಿಂಗ್ ಕೊಟ್ಟ ಬ್ರಾಹ್ಮಣರು!

Prasthutha|

ರಾಮನಗರ :  ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣ ಸಮುದಾಯ ಬಗ್ಗೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ  ವಿರುದ್ಧ ಚನ್ನಪಟ್ಟಣ ಅರ್ಚಕರ ಸಂಘದ ಬ್ರಾಹ್ಮಣರು ಅಕ್ರೋಶಗೊಂಡು ನಮ್ಮ ಬಗ್ಗೆ ಮಾತಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಅಡುಗೆ ಮಾಡಲು ಬಂದರೆ ನಮಸ್ಕಾರ ಬುದ್ದಿ ಅಂತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಬ್ರಾಹ್ಮಣರು ‘ಹೌದು ನಾವು ಸಂಸ್ಕಾರ ಸಮುದಾಯದವರು ಆದ್ದರಿಂದ ನಮಗೆ ನಮಸ್ಕರಿಸುತ್ತಾರೆ. ನಮ್ಮ ರಕ್ತದಲ್ಲೇ ಸಂಸ್ಕಾರ ಬಂದಿದೆ, ನಿಮಗೆ ಸಂಸ್ಕಾರ ಇಲ್ಲ,  ನಿಮ್ಮಿಂದ ನಾವು ಸಂಸ್ಕಾರ ಕಲಿಯಬೇಕಿಲ್ಲ ಎಂದೆಲ್ಲಾ ಕಿಡಿಕಾರಿದ್ದಾರೆ.

ಇಂದಿರಾಗಾಂಧಿ ಕಾಲದಲ್ಲಿ ಯಾರು ಜಾಗ ತಗೊಂಡು, ಬ್ರಾಹ್ಮಣರನ್ನ ಬೀದಿಪಾಲು ಮಾಡಿದ್ರು? ನಿಮ್ಮ ರಾಜಕೀಯವನ್ನು ರಾಜಕೀಯಕ್ಕೆ ಇಟ್ಟುಕೊಳ್ಳಿ! ಹುಷಾರ್ ಎಂದು ಬ್ರಾಹ್ಮಣರು  ಸಿದ್ದುಗೆ ವಾರ್ನಿಂಗ್ ಮಾಡಿದ್ದಾರೆ.



Join Whatsapp