ಉರ್ದು ಭಾಷೆಯಲ್ಲಿ ಪುರಸಭಾ ಕಾರ್ಯಾಲಯದ ನಾಮ ಫಲಕ ಅಳವಡಿಸಿದ್ದಕ್ಕೆ ವಿರೋಧ: ಮುತ್ತಿಗೆಗೆ ಯತ್ನ

Prasthutha|

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪುರಸಭಾ ಕಾರ್ಯಾಲಯದ ನೂತನ ಕಟ್ಟಡದಲ್ಲಿ ಕನ್ನಡ, ಇಂಗ್ಲೀಷ್ ನೊಂದಿಗೆ ಉರ್ದು ಬಾಷೆಯ ನಾಮಫಲಕ ಅಳವಡಿಸಿರುವುದನ್ನು ಖಂಡಿಸಿ ಕನ್ನಡ ಪರ ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

- Advertisement -

ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರು ಉರ್ದು ಭಾಷೆಯ ನಾಮ ಫಲಕವನ್ನು ತೆರವುಗೊಳಿಸದೆ ಇಲ್ಲಿಂದ ಕದಲುವುದಿಲ್ಲ ಎಂದು ಮೇಲಾಧಿಕಾರಿಗಳೊಂದಿಗೆ ಪಟ್ಟುಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧ್ಯಕ್ಷ ‘ಈ ಹಿಂದೆ ಇದ್ದ ಹಳೆಯ ಪುರಸಭೆ ಕಟ್ಟಡದಲ್ಲಿ ಪುರಸಭಾ ಕಾರ್ಯಾಲಯದ ನಾಮಫಲಕವನ್ನು ಕನ್ನಡ, ಇಂಗ್ಲೀಷ್ ಹಾಗೂ ಉರ್ದು ಭಾಷೆಯಲ್ಲಿ ಬರೆಸಲಾಗಿತ್ತು. ಅದೇ ರೀತಿಯಲ್ಲಿ ನಾವು ಈ ಫಲಕವನ್ನು ಅಳವಡಿಸಿದ್ದೇವೆ. ಹೊಸದಾದ ಬದಲಾವಣೆ ಏನೂ ಮಾಡಿಲ್ಲ’ ಎಂದರೂ ಪ್ರತಿಭಟನಾಕಾರರು ಒಪ್ಪಲಿಲ್ಲ.

- Advertisement -

ಆ ಬಳಿಕ ಉರ್ದು ಭಾಷೆಯ ನಾಮ ಫಲಕ ತೆರವಿಗೆ ಒಂದು ದಿನದ ಗಡುವಿನ ಎಚ್ಚರಿಕೆಯನ್ನು ನೀಡಿ ಪ್ರತಿಭಟನಾಕಾರರು ತೆರಳಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp