ಬೆಟ್ಟಿಂಗ್ ಆ್ಯಪ್ ಪ್ರಕರಣ: ರಣ್ ಬೀರ್ ಕಪೂರ್’ಗೆ ಇಡಿ ಸಮನ್ಸ್

Prasthutha|

ನವದೆಹಲಿ: ಬೆಟ್ಟಿಂಗ್ ಆಪ್ ಒಂದರ ಪ್ರಕರಣ ಸಂಬಂಧ ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ.

- Advertisement -


ಬಾಲಿವುಡ್ ನ ಕೆಲವು ನಟ-ನಟಿಯರು, ಸಂಗೀತಗಾರರಿಗೆ ಜಾರಿ ನಿರ್ದೇಶನಾಲಯವು (ಇಡಿ) ಬೆಟ್ಟಿಂಗ್ ಆಪ್ ಒಂದರ ಪ್ರಕರಣ ಸಂಬಂಧ ದಾಳಿ ನಡೆಸಿ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಇದೀಗ ಅದೇ ಪ್ರಕರಣದಲ್ಲಿ ಬಾಲಿವುಡ್ನ ಸ್ಟಾರ್ ನಟ ರಣ್ಬೀರ್ ಕಪೂರ್ಗೂ ಸಮನ್ಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದೆ.


ತನಿಖೆಯ ಭಾಗವಾಗಿ ನಟ ರಣ್ ಬೀರ್ ಕಪೂರ್ ಗೂ ನೊಟೀಸ್ ನೀಡಲಾಗಿದೆ. ಅಕ್ಟೋಬರ್ 6 ರ ಒಳಗಾಗಿ ಸಮನ್ಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದೆ.