ಬೆಂಗಳೂರು ಮಳೆ ಅವಾಂತರ | ಟ್ರಾಕ್ಟರ್ ಏರಿ ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯುದ್ದಕ್ಕೂ ನೀರು ನಿಂತಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣ ಸೇರಲು ಹರಸಾಹಸ ಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಈ ಸಂದರ್ಭ ವಿಮಾನ ನಿಲ್ದಾಣ ತಲುಪಲು ಪ್ರಯಾಣಿಕರು ಟ್ರಾಕ್ಟರ್ ಏರಿದ್ದಾರೆ.

- Advertisement -

ಭಾರೀ ಮಳೆಯಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆ ಸಂಪೂರ್ಣ ಕೆರೆಯಂತಾಗಿದ್ದರಿಂದ ಏರ್ಪೋಟ್ ಟ್ಯಾಕ್ಸಿ, ಕಾರುಗಳ ಸಂಚಾರ ತಟಸ್ಥಗೊಂಡಿತ್ತು. ಹೀಗಾಗಿ ವಿವಿಧ ನಗರಗಳಿಗೆ ತೆರಳಬೇಕಿದ್ದಂತ ಪ್ರಯಾಣಿಕರು ಕ್ಲಪ್ತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪುತ್ತಿವೋ ಇಲ್ಲವೇ ಎನ್ನುವ ಧಾವಂತದಲ್ಲಿದ್ದು, ಭಾರೀ ನೀರಿನಲ್ಲಿಯೂ ಟ್ರ್ಯಾಕ್ಟರ್ ವೊಂದು ಬನ್ನಿ ಬನ್ನಿ ವಿಮಾನ ನಿಲ್ದಾಣಕ್ಕೆ ಹೋಗೋರು ಎಂಬುದಾಗಿ ಕೂಗಿ ಕರೆದು ಪ್ರಯಾಣಿಕರನ್ನು ಹೊತ್ತು ಕರೆದೊಯ್ದಿದ್ದಾರೆ.

ಭಾರೀ ನೀರಿನಲ್ಲಿಯೂ ಟ್ರ್ಯಾಕ್ಟರ್ ವೊಂದು ಬನ್ನಿ ಬನ್ನಿ.. ವಿಮಾನ ನಿಲ್ದಾಣಕ್ಕೆ ಹೋಗೋರು ಎಂಬುದಾಗಿ ಕೂಗಿ ಕರೆದು. ವಿಮಾನಕ್ಕೆ ತೆರಳೋ ಪ್ರಯಾಣಿಕರ ಲಗೇಜ್ ಸಮೇತ ಕರೆದುಕೊಂಡು ಹೋಗಿದ್ದು ಗಮನ ಸೆಳೆದಿದೆ. ಟ್ವೀಟ್ ಮೂಲಕ ಈ ವೀಡಿಯೋ ಶೇರ್ ಮಾಡಿದ್ದು, ಸಖತ್ ವೈರಲ್ ಕೂಡ ಆಗಿದೆ.

Join Whatsapp