ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಮತ್ತು ಯೋಗ ದಿನವನ್ನು ಆಚರಿಸಲು ಮುಂದಾದ ಸಂಘಪರಿವಾರ

Prasthutha|

ಬೆಂಗಳೂರು: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ, ದಕ್ಷಿಣ ಕನ್ನಡದ ಮಳಲಿ ಮಸೀದಿ ಮತ್ತು ಬೀದರ್‌ನ ಪೀರ್‌ಶಾ ದರ್ಗಾ ನಂತರ ಇದೀಗ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ವಿವಾದಕ್ಕೆ ತಳ್ಳುವ ಮೂಲಕ ಪದೇ ಪದೇ ಅಲ್ಪಸಂಖ್ಯಾತರನ್ನು ಗುರಿ ಮಾಡಲು ಸಂಘಪರಿವಾರ ಮತ್ತು ಹಿಂದುತ್ವ ಶಕ್ತಿಗಳು ಯತ್ನಿಸುತ್ತಿದೆ.   

- Advertisement -

ಚಾಮರಾಜಪೇಟೆಯ ಈದ್ಗಾ ಮೈದಾನವು ಮುಸ್ಲಿಮರ ಆಸ್ತಿ ಎಂದು ಪರಿಗಣಿಸಿದ್ದಕ್ಕೆ ಸಂಘಪರಿವಾರ ಮತ್ತು ಹಿಂದುತ್ವ ಶಕ್ತಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಗಸ್ಟ್ 15 ರಂದು ಅದೇ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಮತ್ತು ಜೂನ್ 21 ರಂದು ಯೋಗ ದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುವ ಮೂಲಕ ಈ ಕುರಿತು ಮನವಿ ಸಲ್ಲಿಸಲಿದ್ದೇವೆ ಎಂದು ಹಿಂದುತ್ವ ಮುಖಂಡ ಪಟಾಪಟ್ ಶ್ರೀನಿವಾಸ್ ತಿಳಿಸಿದ್ದಾರೆ.

Join Whatsapp