ಮುಸ್ಲಿಂ ನೌಕರರನ್ನು ವಜಾ ಮಾಡಲು ಮೊದಲೇ ಒತ್ತಡ ಹೇರಿದ್ದ ಬಿಜೆಪಿ ಶಾಸಕ!

Prasthutha|

ಬೆಂಗಳೂರು : ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ಮೇಲೆ ಸಂಸದ ತೇಜಸ್ವಿ ಸೂರ್ಯ ದಾಳಿ ಮಾಡುವುದಕ್ಕೂ ಹಲವು ದಿನಗಳ ಮುನ್ನ, ವಾರ್ಡ್ ರೂಮಿನ 17 ಮುಸ್ಲಿಮ್ ನೌಕರರನ್ನು ವಜಾ ಮಾಡಲು ಅಧಿಕಾರಿಗಳ ಮೇಲೆ ಬಿಜೆಪಿ ಶಾಸಕರೊಬ್ಬರು ಒತ್ತಡ ಹೇರಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

- Advertisement -

ಶಾಸಕ ಮತ್ತು ಬೆಂಬಲಿಗರು ವಾರ್ ರೂಮ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಸ್ಲಿಮ್ ಸಿಬ್ಬಂದಿಗಳನ್ನು ತಕ್ಷಣವೇ ಕೆಲಸದಿಂದ ಕೈಬಿಡಬೇಕೆಂದು ತಮ್ಮ ಮೇಲೆ ಒತ್ತಡ ಹೇರಿರುವುದಾಗಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 “ಈ 17 ಸಿಬ್ಬಂದಿಗಳು ಏನೂ ತಪ್ಪು ಮಾಡಲಿಲ್ಲ, ವಿನಾ ಕಾರಣ ಅವರನ್ನು ಕೆಲಸದಿಂದ ಕೈಬಿಡಲು ಸಾಧ್ಯವಿಲ್ಲ” ಎಂದು ಅವರಿಗೆ ತಾನು ಹೇಳಿದ್ದೇನೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ಕೆಳ ಹಂತದ ಅಧಿಕಾರಿಕಾರಿಯ ಮೇಲೂ ಒತ್ತಡ ಹೇರಿದ್ದರು ಎಂದು ಅವರು ತಿಳಿಸಿದ್ದಾರೆ.  

- Advertisement -

ಮುಸ್ಲಿಮ್ ನೌಕರರನ್ನು ವಜಾಗೊಳಿಸದಿದ್ದರೆ ನಿಮಗೂ ತೊಂದರೆಯಾಗಬಹುದು ಎಂದು ಶಾಸಕರು ಬೆದರಿಕೆ ಹಾಕಿದ್ದರು. ಇದಕ್ಕೂ ಒಪ್ಪದಿದ್ದಾಗ ಮೇ 4ರಂದು ವಾರ್ ರೂಮ್ ಗೆ ದಾಳಿ ಮಾಡಿದ್ದಾರೆ. ಮುಸ್ಲಿಮ್ ನೌಕರರನ್ನು ವಾರ್ ರೂಮ್ ನಿಂದ ಕೈಬಿಟ್ಟು ತಮ್ಮವರನ್ನೇ ಕೆಲಸಕ್ಕೆ ನೇಮಿಸಲು ಶಾಸಕರು ನಿರ್ಧರಿಸಿದ್ದರು ಎಂದು ಅವರು ಹೆಳುತ್ತಾರೆ.

Join Whatsapp