ಭವಿಷ್ಯದಲ್ಲಿ ಗೋವಾವನ್ನು ಪ್ರಬಲ ರಾಜ್ಯವಾಗಿಸುತ್ತೇನೆ: ಟಿ.ಎಂ.ಸಿ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ

Prasthutha|

ಮಡ್ಗಾಂವ್: ಭವಿಷ್ಯದಲ್ಲಿ ಬಂಗಾಳ ಮಾದರಿಯಲ್ಲಿ ಗೋವಾವನ್ನು ಪ್ರಬಲ ರಾಜ್ಯವನ್ನಾಗಿ ನೋಡ ಬಯಸುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತಿಳಿಸಿದ್ದಾರೆ.

- Advertisement -

ಗೋವಾದಲ್ಲಿ ನೂತನ ಉದಯವನ್ನು ನಾನು ಎದುರು ನೋಡುತ್ತಿದ್ದು, ಸಮಗ್ರ ಗೋವಾದ ಅಭಿವೃದ್ಧಿಗಾಗಿ ಟಿ.ಎಂ.ಸಿ ಯನ್ನು ಅಧಿಕಾರಕ್ಕೇರಿಸುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.

ಪಶ್ಚಿಮ ಬಂಗಾಳದಲ್ಲಿರುವ ಮಮತಾ ಬ್ಯಾನರ್ಜಿ ಗೋವಾದ ಜನರಿಗೆ ಏನು ಮಾಡುತ್ತಾರೆ ಎಂದು ಪ್ರಶ್ನಿಸುವವರಿಗೆ ಪ್ರತಿಕ್ರಿಯಿಸಿದ ಅವರು ಭಾರತೀಯಳಾದ ನಾನು ಎಲ್ಲಿ ಬೇಕಾದರೂ ಕಾರ್ಯನಿರ್ವಹಿಸಬಹುದು. ಮಾತ್ರವಲ್ಲ ದೇಶದ್ಯಾಂತ ಸಂಚರಿಸಿ ಟಿ.ಎಂ.ಸಿ ಪಕ್ಷವನ್ನು ಬಲಪಡಿಸುವುದಾಗಿ ತಿಳಿಸಿದರು.

- Advertisement -

ಜಾತ್ಯತೀತತೆ ಮೇಲೆ ನಂಬಿಕೆಯಿರಿಸಿದ ನಾನು ದೇಶದ ಏಕತೆಯನ್ನು ಪ್ರತಿಪಾದಿಸುತ್ತೇನೆ ಎಂದು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಭಾರತ ನಮ್ಮ ಮಾತೃಭೂಮಿಯಾದರೆ, ಗೋವಾ ನನ್ನ ತಾಯ್ನಾಡು ಎಂದು ಅವರು ಗೋವಾದ ಪಣಜಿಯಲ್ಲಿ ಪಕ್ಷದ ಮುಖಂಡರನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.



Join Whatsapp