ರಷ್ಯಾದಲ್ಲಿ ಹೆಚ್ಚುತ್ತಿರುವ ಕೊರೊನಾ, ರಾಜಧಾನಿಯಲ್ಲಿ 11 ದಿನ ಲಾಕ್ಡೌನ್

Prasthutha|

ಮಾಸ್ಕೋ : ಚೀನಾದ ಬೆನ್ನಲ್ಲೇ ರಷ್ಯಾದಲ್ಲೂ ಕೊರೊನಾ ಉಲ್ಬಣಗೊಂಡಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಣಾಮವಾಗಿ ದೇಶದ ರಾಜಧಾನಿ ಮಾಸ್ಕೋದಲ್ಲಿ 11 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಇಂದು ಅಂಗಡಿಗಳು, ಶಾಲೆಗಳು, ರೆಸ್ಟೋರೆಂಟ್ ಗಳೆಲ್ಲ ಬಂದ್ ಆಗಿವೆ. ಅಗತ್ಯವಲ್ಲದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಅಂದರೆ, ರೆಸ್ಟೋರೆಂಟ್ ಗಳು, ಚಿಲ್ಲರೆ ವ್ಯಾಪಾರ ಅಂಗಡಿಗಳು, ಮನರಂಜನಾ ಸ್ಥಳಗಳು, ಶಾಲೆಗಳು ನವೆಂಬರ್ 7ರವರೆಗೆ ಮುಚ್ಚಿರುತ್ತವೆ ಎಂದು ಸರ್ಕಾರ ಘೋಷಿಸಿದೆ.

- Advertisement -

ಚೀನಾದಲ್ಲಿ ಕೊರೊನಾ ಹೆಚ್ಚಳವುಂಟಾಗಿ ಲಾಕ್ ಡೌನ್ ಮಾಡಲಾಗುತ್ತಿರುವಂತೆ ಕೊರೊನಾದಿಂದ ಅತ್ಯಂತ ಹೆಚ್ಚು ಹಾನಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದಾದ ರಷ್ಯಾದಲ್ಲಿಯೂ ಲಾಕ್ ಡೌನ್ ವಿಧಿಸಲಾಗಿದೆ. ರಷ್ಯಾದಲ್ಲಿ ಕೊರೊನಾ ಪ್ರಕರಣಗಳು ಮಿತಿಮೀರುತ್ತಿದ್ದು ಸರಕಾರ ಈ ಕ್ರಮಕೈಗೊಂಡಿದೆ.

ರಷ್ಯಾವು ಸ್ವದೇಶಿ ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯನ್ನೇ ಜನರಿಗೆ ಕೊಡಲು ಪ್ರಯತ್ನಿಸುತ್ತಿದೆ. ಆದರೆ ರಷ್ಯಾದ ಜನರು ಲಸಿಕೆ ಹಾಕಿಸಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಇಂದಿನವರೆಗೆ ರಷ್ಯಾದಲ್ಲಿ ಕೇವಲ ಶೇ.32ರಷ್ಟು ಜನರಿಗೆ ಮಾತ್ರ ಕೊವಿಡ್ 19 ಲಸಿಕೆ ನೀಡಿ ಮುಗಿದಿದೆ.
ಇದೀಗ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದು ನವೆಂಬರ್ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಘೋಷಣೆ ಮಾಡಿದ್ದಾರೆ. ಮಾಸ್ಕೋ ನಗರದಲ್ಲಿ ಇಂದು ಮುಂಜಾನೆಯಿಂದಲೇ ಲಾಕ್ಡೌನ್ ಪರಿಣಾಮ ವಾಹನ ಸಂಚಾರ ಕಡಿಮೆ ಇದ್ದು, ಜನರ ಓಡಾಟವೂ ವಿರಳವಾಗಿದೆ. ನಿನ್ನೆ ಒಂದೇ ದಿನ ರಷ್ಯಾದಲ್ಲಿ ಕೊವಿಡ್ 19 ನಿಂದ 1,123 ಮಂದಿ ಮೃತಪಟ್ಟಿದ್ದು ವರದಿಯಾಗಿದೆ.

- Advertisement -

ರಷ್ಯಾದಲ್ಲಿ ಇದುವರೆಗೆ ಸುಮಾರು 2,30,000 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

Join Whatsapp