ಬೆಳ್ತಂಗಡಿ: ಭಾರೀ ಮಳೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ | SDPI ಕಾರ್ಯಕರ್ತರಿಂದ ರಕ್ಷಣಾ ಕಾರ್ಯ

Prasthutha|

ಬೆಳ್ತಂಗಡಿ:  ಮಧ್ಯಾಹ್ನ ನಂತರ ಬೆಳ್ತಂಗಡಿ ಸುರಿದ ಗಾಳಿ ಮಳೆಗೆ ವಿವಿಧ ಕಡೆ ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತವುಂಟಾಗಿದೆ. ತಕ್ಷಣ ಕಾರ್ಯಾಚರಣೆಗಿಳಿದ SDPI ಕಾರ್ಯಕರ್ತರು ತೆರವು ಕಾರ್ಯ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

ರಾಜ್ಯ ಹೆದ್ದಾರಿಯಲ್ಲಿ ಮರಗಳು ಮುರಿದು ಬಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸೇರಿ SDPI ಕಾರ್ಯಕರ್ತರು ತೆರವು ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ತಾಲೂಕಿನ ಬೆಳ್ತಂಗಡಿ ನಗರ, ಗುರುವಾಯನಕೆರೆ, ಕುವೆಟ್ಟು ಗ್ರಾಮ, ಅಳದಂಗಡಿ, ಉಜಿರೆ ಭಾಗದಲ್ಲಿ ಧಾರಾಕಾರ ಗಾಳಿ ಮಳೆ ಸುರಿದಿದ್ದು ಅಪಾರ ನಷ್ಟವನ್ನು ಜನರು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.  

ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿ ಅಲ್ಫಾನ್ಸೋ ಫ್ರಾಂಕೋ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು


Join Whatsapp