ಬೆಳ್ತಂಗಡಿ: ಮುಸ್ಲಿಮ್ ರಿಕ್ಷಾ ಚಾಲಕನಿಗೆ ಹಲ್ಲೆ

Prasthutha|

ಬೆಳ್ತಂಗಡಿ: ಮುಸ್ಲಿಮ್ ರಿಕ್ಷಾ ಚಾಲಕರೊಬ್ಬರಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಉಜಿರೆ ಸಮೀಪದ ಸುರಿಯಾ ಎಂಬಲ್ಲಿಗೆ ಬಾಡಿಗೆ ಹೋಗಿದ್ದನ್ನೇ ನೆಪವಾಗಿಟ್ಟು ಮುಸ್ಲಿಂ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಉಮರಬ್ಬ (50) ಹಲ್ಲೆಗೊಳಗಾದ ಆಟೋ ಚಾಲಕ.  ಉಮರಬ್ಬ ಅವರು ಸುರಿಯಾ ಜನಾರ್ದನ ದೇವಸ್ಥಾನದ ಬಳಿ ಆಟೋ ರಿಕ್ಷಾ ನಿಲ್ಲಿಸಿದ್ದಕ್ಕೆ ಸುಮೋ ಚಾಲಕರೊಬ್ಬರು ತಗಾದೆ ತೆಗೆದಿದ್ದಾರೆ. ಈ ವೇಳೆ ಅವರಿಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಂಘಪರಿವಾರಕ್ಕೆ ಸೇರಿದ ಉಜಿರೆಯ ಇತರ ಆಟೋ ಚಾಲಕರು ಉಮರಬ್ಬ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

ಗಾಯಗೊಂಡ ಉಮರಬ್ಬ ಅವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ರಿಕ್ಷಾ ಚಾಲಕರು ಕೂಡ ಪ್ರತಿ ದೂರು ನೀಡಿದ್ದಾರೆ ಎನ್ನಲಾಗಿದೆ.



Join Whatsapp