ಬೆಳ್ತಂಗಡಿ: 1.10 ಕೋಟಿ ಚೆಕ್ ಬೌನ್ಸ್ ಉತ್ತರ ಪ್ರದೇಶದಲ್ಲಿ ಆರೋಪಿ ಸೆರೆ

Prasthutha|

ಮಂಗಳೂರು:  ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.

- Advertisement -

ಬೆಳ್ತಂಗಡಿ ತಾಲೂಕಿನ ನಿವಾಸಿಯೊಬ್ಬರ ಒಂದು ಕೋಟಿ ಹತ್ತು ಲಕ್ಷ ರೂ. ಮೊತ್ತದ ಚೆಕ್ , ಬ್ಯಾಂಕ್ ನಲ್ಲಿ ಬೌನ್ಸ್ ಅಗಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಗರದ ನಿವಾಸಿ ದೀಪಕ್ ಮೌರ್ಯ(33) ಕಳೆದ ಒಂದು ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಬಂಧಿಸಲು ಆದೇಶ ಹೊರಡಿಸಿತ್ತು. ಬೆಳ್ತಂಗಡಿ ಪೊಲೀಸರು ಹಲವು ಭಾರಿ ಆರೋಪಿಯ ಬಂಧನಕ್ಕೆ ಹೋದಾಗ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಈ ಬಾರಿ ಮಾತ್ರ ಖದೀಮ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಜೈಲುಪಾಲಾಗಿದ್ದಾನೆ.

- Advertisement -

ಬೆಳ್ತಂಗಡಿ ಪೊಲೀಸರು ಪ್ರಯಾಗ್ ರಾಜ್ ನಗರದ ಪೊಲೀಸ್ ಠಾಣೆಗೆ ಹೋಗಿ ಹಿರಿಯ ಪೊಲೀಸರ ಬಳಿ ಆರೋಪಿಯ ದಸ್ತಗಿರಿ ಮಾಡುವ ವಾರೆಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅವರದ್ದೇ ಪೊಲೀಸ್ ವಾಹನದಲ್ಲಿ ಶಸ್ತ್ರಾಸ್ತ್ರ ಜೊತೆ ಆರೋಪಿ ಮನೆಗೆ ದಾಳಿ ಮಾಡಿ, ದೀಪಕ್ ಮೌರ್ಯನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಪ್ರದೇಶ ವಿಮಾನ ನಿಲ್ದಾಣದವರೆಗೆ ಭದ್ರತೆಯಲ್ಲಿ ಪ್ರಯಾಗ್ ರಾಜ್ ನಗರ ಪೊಲೀಸರು ತಲುಪಿಸಿದರು. ಅಲ್ಲಿಂದ ದೆಹಲಿ ಮೂಲಕ ವಿಮಾನದಲ್ಲಿ ಮಂಗಳೂರಿಗೆ ಕರೆ ತರಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Join Whatsapp