ಬೆಳ್ತಂಗಡಿ : ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ; ಸ್ನೇಕ್ ಜೋಯ್ ಯಶಸ್ವಿ ಪ್ರಯತ್ನ

Prasthutha|

ಬೆಳ್ತಂಗಡಿ : ರಾಜ್ಯದ ಪ್ರಸಿದ್ಧ ಉರಗ ತಜ್ಞರಲ್ಲಿ ಒಬ್ಬರಾದ ಸ್ನೇಕ್ ಜೋಯ್ ಅವರು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ ಕಾಳಿಂಗ ಸರ್ಪ ರಕ್ಷಣೆ ಮಾಡುವ ಮುಖಾಂತರ ಇದೀಗ ಹೆಚ್ಚು ಜನಪ್ರಿಯರಾಗಿದ್ದಾರೆ. ಕಾಳಿಂಗ ಸರ್ಪ ರಕ್ಷಣೆ ವೇಳೆ ಕಾಲಿಗೆ ಕಚ್ಚಲು ದಾಳಿ ಮಾಡಿದ್ದು ಸ್ಪಪದರಲ್ಲೇ ಪರಾಗಿದ್ದು, ಇದರ ವಿಡಿಯೋ ಕೂಡ ವೈರಲ್ ಅಗಿದೆ.

- Advertisement -

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸ್ನೇಕ್ ಜೋಯ್ (52), 2005 ರಿಂದ ಹಾವಿನ ರಕ್ಷಣೆಯಲ್ಲಿ ತೊಡಗಿದ್ದು ಈವರೆಗೆ ಸುಮಾರು 9500 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. 2007 ರಲ್ಲಿ ಬೆಳ್ತಂಗಡಿ ತಾಲೂಕಿನ ಬದ್ಯಾರಿನ ಡೊಂಜೋಳಿಯಲ್ಲಿ ಕಾಳಿಂಗ ಸರ್ಪ ರಕ್ಷಣೆ ಮಾಡುವ ಮೂಲಕ ಮೊದಲ ಬಾರಿಗೆ ಯಶಸ್ವಿಯಾಗಿದ್ದು, ಇದೀಗ ಕಕ್ಕಿಂಜೆಯಲ್ಲಿ ರಕ್ಷಣೆ ಮಾಡಲ್ಪಟ್ಟ ಕಾಳಿಂಗ ಸರ್ಪ ಸೇರಿ ಒಟ್ಟು 222 ಕಾಳಿಂಗ ಸರ್ಪ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಸ್ನೇಕ್ ಜೋಯ್ ಅವರು 2007 ನೇ ಇಸವಿಯಲ್ಲಿ ಬೆಳ್ತಂಗಡಿ ಕೋರ್ಟ್ ರೋಡ್ ಬಳಿ ಮತ್ತು 2009 ರಲ್ಲಿ ಉಜಿರೆ ಗ್ರಾಮದ ಪೆರ್ಲ ಬಳಿ ನಾಗರ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದರು.

ಸ್ನೇಕ್ ಜೋಯ್ ಅವರ ಶಿಷ್ಯ ಸ್ನೇಕ್ ಅಶೋಕ್‌ ಕೂಡಾ ಹಾವಿನ ರಕ್ಷಣೆಯಲ್ಲಿ ತಾಲೂಕಿನಲ್ಲಿ ಜನಪ್ರಿಯರಾಗಿದ್ದು, ತಾಲೂಕಿನ ವಿವಿಧೆಡೆ ಹಾವಿನ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶ ವಿದೇಶದಿಂದ ಹಲವು ಮಂದಿ ಸ್ನೇಕ್ ಜೋಯ್ ಅವರ ಬಳಿಗೆ ಹಾವಿನ ಬಗ್ಗೆ ಮಾಹಿತಿ ಪಡೆಯಲು ಬರುತ್ತಿರುತ್ತಾರೆ.



Join Whatsapp