ಕೊಲ್ಲಿ ಉದ್ಯೋಗಿಯ ಹತ್ಯೆ: ರಹಸ್ಯ ಭೇದಿಸಿ ಕಠಿಣ ಕ್ರಮಕ್ಕೆ ಎಸ್.ಡಿ.ಪಿ.ಐ ಆಗ್ರಹ

Prasthutha|

ಮಂಜೇಶ್ವರ: ಪುತ್ತಿಗೆ ನಿವಾಸಿ ಹಾಗೂ ಕೊಲ್ಲಿ ಉದ್ಯೋಗಿಯಾದ ಯುವಕನನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ.

- Advertisement -

ಪ್ರಕರಣದ ಹಿಂದಿರುವ ರಹಸ್ಯಗಳನ್ನು ಭೇದಿಸಬೇಕು. ಇಂತಹ ಕೃತ್ಯಗಳನ್ನು ನಡೆಸುವ ಸಮಾಜಘಾತುಕ ಶಕ್ತಿಗಳು ಊರಿನ ಶಾಂತಿ ಸುವ್ಯವಸ್ಥೆಗೆ ಸವಾಲಾಗಿವೆ. ಇತ್ತೀಚೆಗೆ ಇಂತಹ ಘಟನೆಗಳು ನಮ್ಮ ಪರಿಸರದಲ್ಲಿ ಹೆಚ್ಚುತ್ತಾ ಇವೆ. ಸಮಾಜ ಘಾತುಕ ಶಕ್ತಿಗಳಿಗೆ ಬೆಂಗಾವಲಾಗಿ ನಿಲ್ಲುವ ಎಲ್ಲಾ ಕ್ರಿಮಿನಲುಗಳನ್ನು ಬಂಧಿಸಿ ಕಾನೂನಿನ ಮುಂದೆ ತರಬೇಕೆಂದೂ ಈ ತರದ ಘಟನೆಗಳಿಗೆ ಮುಂದಾಳುತ್ವ ವಹಿಸುವ ಕೊಲೆಗಡುಕ ಮಾಫಿಯಾ ತಂಡಗಳ ಬಗ್ಗೆ ಜಗೃತರಾಗಬೇಕೆಂದೂ ಸಮಿತಿ ಕರೆ ನೀಡಿದೆ.



Join Whatsapp