ಪ್ರೀತಿಯ ಶಿಕ್ಷಕ ವರ್ಗಾವಣೆ: ಮಕ್ಕಳು ಕಣ್ಣೀರು

Prasthutha|

ಕಲಬುರಗಿ: ಪ್ರೀತಿಯ ಶಿಕ್ಷಕ ತಮ್ಮ ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿರುವಾಗ ವಿದ್ಯಾರ್ಥಿಗಳು ಹಾಗೂ ಇತರ ಸಹೋದ್ಯೋಗಿ ಶಿಕ್ಷಕರು ಗಳಗಳನೆ ಕಣ್ಣೀರಿಟ್ಟ ಘಟನೆ ಕಲಬುರಗಿ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ನಡೆಯಿತು.

- Advertisement -

ಲಿಂಗಂಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ರಾಘವೇಂದ್ರ ಕುಲಕರ್ಣಿ ಅವರು ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ  ಸಹೋದ್ಯೋಗಿಯಾಗಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ಹೇಳುತ್ತೀರುವ ವೀಡಿಯೋ ವೈರಲ್ ಆಗಿದೆ.

ಮಕ್ಕಳು ಹಾಗೂ ಸಹೋದ್ಯೋಗಿಗಳ ಕಣ್ಣೀರು ಕಂಡ ಶಿಕ್ಷಕ ಕೂಡ ಭಾವುಕರಾದರು.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp