ಗೋವಾದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ತಿಂಗಳಿಗೆ 5 ಸಾವಿರ ರೂ.: ಸಂಸದೆ ಮಹುವಾ ಮೊಯಿತ್ರಾ

Prasthutha|

ಪಣಜಿ: ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗಾಗಿ ನೇರ ನಗದು ವರ್ಗಾವಣೆ ಯೋಜನೆಯನ್ನು ಆರಂಭಿಸುವುದಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಘೋಷಿಸಿದ್ದಾರೆ.

- Advertisement -

‘ಗೃಹ ಲಕ್ಷ್ಮಿ ಎಂಬ ಹೆಸರಿನ ಈ ಯೋಜನೆಯಡಿ, ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬಂದರೆ, ಹಣದುಬ್ಬರವನ್ನು ಕಡಿಮೆ ಮಾಡಲು ಖಾತರಿ ಆದಾಯ ಬೆಂಬಲವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ತಿಂಗಳಿಗೆ ₹ 5 ಸಾವಿರವನ್ನು ವರ್ಗಾವಣೆ ಮಾಡಲಾಗುವುದು’ ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ತಿಳಿಸಿದ್ದಾರೆ.

‘ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ.
‘ಗೋವಾ ಬಿಜೆಪಿ ಸರ್ಕಾರದ ಸದ್ಯದ ಯೋಜನೆಯು ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹ 1,500 ಅನ್ನು ನೀಡುತ್ತಿದೆ ಮತ್ತು ಇದು ಆದಾಯ ಮಿತಿಯಿಂದಾಗಿ ಕೇವಲ 1.5 ಲಕ್ಷ ಮಹಿಳೆಯರನ್ನು ಒಳಗೊಂಡಿದೆ. ಗೃಹ ಆಧಾರ್ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಲು ವರ್ಷಕ್ಕೆ ₹ 270 ಕೋಟಿಯ ಅಗತ್ಯವಿದೆ. ಆದರೆ ಗೋವಾ ಸರ್ಕಾರವು ವರ್ಷಕ್ಕೆ ಕೇವಲ ₹ 140 ಕೋಟಿಯನ್ನು ಮಾತ್ರ ಮೀಸಲಿಟ್ಟಿರುವುದರಿಂದಾಗಿ ಬಹುತೇಕರು ಯೋಜನೆಯಿಂದ ವಂಚಿತರಾಗಿದ್ದಾರೆ’ ಎಂದು ಮಹುವಾ ಹೇಳಿದರು.

- Advertisement -

ಇತ್ತೀಚೆಗಷ್ಟೇ ಗೋವಾಗೆ ಭೇಟಿ ನೀಡಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಅರವಿಂದ ಕೇಜ್ರಿವಾಲ್, ‘ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಗೃಹ ಆಧಾರ್ ಯೋಜನೆಯ ಮೊತ್ತವನ್ನು ₹ 1,500 ರಿಂದ ₹ 2,500ಕ್ಕೆ ಹೆಚ್ಚಿಸಲಾಗುವುದು. ಸದ್ಯ ಈ ಯೋಜನೆಯ ಫಲಾನುಭವಿಗಳಲ್ಲದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೂ ತಿಂಗಳಿಗೆ ₹ 1,000 ವನ್ನು ನೀಡಲಾಗುವುದು’ ಎಂದು ಘೋಷಿಸಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp