ಬಳ್ಳಾರಿ: ಮನೆಯೊಂದರಿಂದ 5.60 ಕೋಟಿ ರೂ., 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿ ಜಪ್ತಿ

Prasthutha|

ಬಳ್ಳಾರಿ: ಮನೆಯೊಂದರಿಂದ ದಾಖಲೆಯಿಲ್ಲದ ಬರೋಬ್ಬರಿ 5.60 ಕೋಟಿ ರೂ.,, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

ಖಚಿತ ಮಾಹಿತಿಯಂತೆ ನಗರದ ಕಂಬಳಿ ಬಜಾರ್‌ನ ಆಭರಣ ಅಂಗಡಿಯ ಮಾಲೀಕ ನರೇಶ್ ಎಂಬವರ ಮನೆಯ ಮೇಲೆ ಇಂದು ಬಳ್ಳಾರಿ ಡಿವೈಎಸ್ಪಿ ಮತ್ತು ಬ್ರೂಸ್ ಪೇಟೆಯ ಪೊಲೀಸರು ದಾಳಿ ನಡೆಸಿ ಬೃಹತ್ ಹಣ ಮತ್ತು ನಗವನ್ನು ವಶಪಡಿಸಿಕೊಂಡಿದ್ದಾರೆ.

ಮನೆಯಿಂದ ಜಪ್ತಿ ಮಾಡಲಾದ 5.60 ಕೋಟಿ ಹಣ, 2 ಕೋಟಿ ಮೌಲ್ಯದ 3 ಕೆಜಿ ಬಂಗಾರ, 103 ಕೆಜೆ ಬೆಳ್ಳಿ ಹಾಗೂ 21 ಕೆಜಿ ಕಚ್ಚಾ ಬೆಳ್ಳಿ ಗಟ್ಟಿ ಹೀಗೆ ಒಟ್ಟು ಮೌಲ್ಯ 7.5 ಕೋಟಿ ಎನ್ನಲಾಗುತ್ತಿದೆ.

- Advertisement -

ಸೂಕ್ತ ದಾಖಲೆಯಿಲ್ಲದೆ ಮನೆಯಲ್ಲಿ ಇರಿಸಿಕೊಂಡಿದ್ದ ಮಾಲೀಕ ನರೇಶ್‌ನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ‌, ಪರಿಶೀಲ‌ನೆ ನಡೆಸಿದ್ದಾರೆ.



Join Whatsapp