ಬೆಳಗಾವಿ: ಚಿರತೆ ಸೆರೆಗೆ ಅರ್ಜುನ್, ಆಲೆ ಆಗಮನ

Prasthutha|

ಬೆಳಗಾವಿ:  ನಗರದ ಗಾಲ್ಫ್ ಕ್ಲಬ್‍ನಲ್ಲಿ ಅಡಗಿರುವ ಚಿರತೆ ಪತ್ತೆ ಕಾರ್ಯಾಚರಣೆ 20ನೇ ದಿನಕ್ಕೆ ಕಾಲಿಟ್ಟಿದ್ದು, ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಅರ್ಜುನ್ ಹಾಗೂ ಆಲೆ ಹೆಸರಿನ ಎರಡು ಆನೆಗಳನ್ನು ಕರೆ ತರಲಾಗಿದೆ.

- Advertisement -

ನಗರದ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ 22 ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಬುಧವಾರ ಕೂಡ ರಜೆ ಮುಂದುವರಿಸಲಾಗಿದೆ.

ಸುಮಾರು 250 ಎಕರೆ ಪ್ರದೇಶದಲ್ಲಿ ಇರುವ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಸೆರೆಗೆ ಇಂದಿನಿಂದ ಎರಡು ಆನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಲಿದೆ. ಶಿವಮೊಗ್ಗದ ಸಕ್ರೆಬೈಲ್ ಬಿಡಾರದಿಂದ ಇಂದು ಮಧ್ಯರಾತ್ರಿ ಎರಡು ಆನೆಗಳನ್ನು ಕರೆತರಲಾಗಿದೆ. ಅರ್ಜುನ್ ಮತ್ತು ಆಲೆ ಎನ್ನುವ ಎರಡು ಆನೆಗಳನ್ನು ಬಳಸಿ ಇಂದು ಕೊಂಬಿಂಗ್ ಮಾಡಲಾಗುತ್ತದೆ. ಆನೆಗಳ ಜೊತೆಗೆ ಡಾರ್ಟ್ ಸ್ಪೆಷಲಿಸ್ಟ್ ಡಾ. ವಿನಯ್ ಸಹ ಬೆಳಗಾವಿಗೆ ಆಗಮಿಸಿದ್ದು, ಡಾ. ವಿನಯ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.

- Advertisement -

ಇತ್ತೀಚೆಗೆ ಡಾ.ವಿನಯ್ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಚಿರತೆ ಸೆರೆ ಹಿಡಿಯಲಾಗಿತ್ತು. ಹೀಗಾಗಿ ಅವರ ಜೊತೆಗೆ ನುರಿತ ಮಾವುತರು, ಕವಾಡಿಗಳು ಹಾಗೂ ಬೆಳಗಾವಿಯಲ್ಲಿ ಸದ್ಯ ಇರುವ ಇಬ್ಬರು ಡಾರ್ಟ್ ಸ್ಪೆಷಲ್ ಶೂಟರ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. 80ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಇಂದಿನಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕ್ಲಬ್ ಸುತ್ತಮುತ್ತಲಿನ ಹಲವು ಬಡಾವಣೆಗಳ ಜನರಿಗೆ ಆತಂಕ ಮೂಡಿದ್ದು, ಆದಷ್ಟು ಬೇಗ ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



Join Whatsapp