ಲಾರಿ ಬೈಕ್ ಡಿಕ್ಕಿ : ದಂಪತಿ ಸೇರಿ ಮೂವರು ಸಾವು

Prasthutha|

ಬಳ್ಳಾರಿ:  ವೇಗವಾಗಿ ಬಂದ ಲಾರಿ  ಬೈಕ್​ ಗೆ ಡಿಕ್ಕಿ ಹೊಡೆದ ಪರಿಣಾಮ  ಪತಿ, ಪತ್ನಿ ಮಗ  ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬ ಮಗು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಗರದ ಕೌಲ್ ಬಜಾರ್ ಫ್ಲೈ ಓವರ್ ಬಳಿ ನಡೆದಿದೆ.

- Advertisement -

ವೀರೇಶ್​​ ಮತ್ತವರ ಪತ್ನಿ ಅಂಜಲಿ ಹಾಗೂ ಪುತ್ರ ದಿನೇಶ್ ಸೇರಿ ಮತ್ತೊಬ್ಬ ‌ಮಗು ಸೇರಿ ನಾಲ್ವರು ಒಂದೇ ಬೈಕ್ ನಲ್ಲಿ‌  ಕೌಲ್ ಬಜಾರ್ ಫ್ಲೈ ಓವರ್ ರಸ್ತೆಯಲ್ಲಿ ಹೋಗುತ್ತಿದ್ದರು.

ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ  ಬೈಕ್ ಗೆ ಡಿಕ್ಕಿ ಹೊಡೆದಿದೆ.

- Advertisement -

ಡಿಕ್ಕಿಯ ರಭಸಕ್ಕೆ ಪತಿ,ಪತ್ನಿ ಮಗು ಸಾವನ್ನಪ್ಪಿದ್ದಾರೆ. ಮತ್ತೋರ್ವ ಮಗು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ

ಲಾರಿ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp