ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ । ರಾಯಭಾರಿಯನ್ನು ಕಳುಹಿಸದಿರಲು ಭಾರತ ನಿರ್ಧಾರ

Prasthutha|

ಬೀಜಿಂಗ್: ಬೀಜಿಂಗ್ ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭಗಳಲ್ಲಿ ತನ್ನ ರಾಯಭಾರಿಯನ್ನು ಕಳುಹಿಸುವುದಿಲ್ಲ ಎಂದು ಭಾರತ ಘೋಷಿಸಿದ್ದು, ಗಾಲ್ವಾನ್ ನಲ್ಲಿ ನೆಲೆಸಿರುವ ಚೈನಾ ಸೈನಿಕರ ನಡೆಯನ್ನು ಪ್ರತಿಭಟಿಸುವ ಭಾಗವಾಗಿ ಈ ಒಲಿಂಪಿಕ್ಸ್ ನಲ್ಲಿ ರಾಜತಾಂತ್ರಿಕ ಬಹಿಷ್ಠಾರ ನಡೆಸುವುದಾಗಿ ಭಾರತ ತಿಳಿಸಿದೆ.

- Advertisement -

ಒಲಿಂಪಿಕ್ಸ್ ನಂತರ ಸಮಾರಂಭವನ್ನು ರಾಜಕೀಯಗೊಳಿಸುವ ಚೈನಾದ ನಡೆ ವಿಷಾದನೀಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಬ್ಲಿಕ್ ಬ್ರಾಡ್ ಕಾಸ್ಟರ್ ಪ್ರಸಾರ ಭಾರತಿ, ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ನೇರ ಪ್ರಸಾರ ಮಾಡುವುದಿಲ್ಲ ಎಂದು ಘೋಷಿಸಿದೆ.

- Advertisement -

ಈ ಮಧ್ಯೆ ಉಯಿಘರ್ ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ರಾಷ್ಟ್ರಗಳು ಈಗಾಗಲೇ ರಾಜತಾಂತ್ರಿಕ ಬಹಿಷ್ಕಾರವನ್ನು ಘೋಷಿಸಿವೆ. ಈ ವೇಳೆ ಮೇಲಿನ ರಾಷ್ಟ್ರಗಳು ಕ್ರೀಡಾಪಟುಗಳನ್ನು ಮಾತ್ರ ಕಳುಹಿಸುತ್ತಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Join Whatsapp