‘ಬೇಡರ ಕಣ್ಣಪ್ಪ’ ಪೋಸ್ಟರ್ ಹಾಕಿ ಲೀನಾ ಪರ ಧ್ವನಿ ಎತ್ತಿದ ನಟ ಕಿಶೋರ್

Prasthutha|

ಬೆಂಗಳೂರು: ‘ಕಾಳಿ’ ಸಿಗರೇಟ್ ಸೇದುತ್ತಿರುವ ರೀತಿಯ ಪೋಸ್ಟರ್ ಹಾಕುವ ಮೂಲಕ ಸುದ್ದಿಯಾಗಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ಪರ ಕನ್ನಡದ ನಟ ಕಿಶೋರ್ ಧ್ವನಿ ಎತ್ತಿದ್ದಾರೆ.

- Advertisement -


ಡಾ. ರಾಜ್ ಕುಮಾರ್ ನಟನೆಯ ‘ಬೇಡರ ಕಣ್ಣಪ್ಪ’ ಚಿತ್ರದ ಪೋಸ್ಟರ್ ಹಾಕಿ ಲೀನ್ ಪರ ನಿಲುವು ವ್ಯಕ್ತಪಡಿಸಿದ್ದಾರೆ.


ಡಾ. ರಾಜ್ ಕುಮಾರ್ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ದೃಶ್ಯವೊಂದು ಬರುತ್ತದೆ. ಬೇಡರ ಕಣ್ಣಪ್ಪ ಈಶ್ವರ ಲಿಂಗಕ್ಕೆ ತಮ್ಮ ಕಾಲನ್ನು ತಾಗಿಸಿ, ಕಣ್ಣು ಕಿತ್ತು ಕೊಡುತ್ತಾರೆ. ಈ ಪೋಸ್ಟರ್ ಹಂಚಿಕೊಂಡಿರುವ ಕಿಶೋರ್, ‘‘ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನ ಹಕ್ಕು, ನನ್ನ ಸ್ವಾತಂತ್ರ್ಯ, ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ. ಯಾರಿಗೂ ಅದನ್ನು ನಿರ್ದೇಶಿಸುವ, ರಾಜಕೀಯವಾಗಿಸುವ ಹಕ್ಕಿಲ್ಲ’’ ಎಂದು ಬರೆದುಕೊಂಡಿದ್ದಾರೆ.



Join Whatsapp