ಸುಂದರ ಮೈಕಟ್ಟು, ಉತ್ತಮ ವ್ಯಕ್ತಿತ್ವ ಹೊಂದಿದ್ದ ಕಾರಣ; ದಲಿತ ವ್ಯಕ್ತಿಯ ಹತ್ಯೆ

Prasthutha|

► ದಲಿತ್‌ ಫೈಲ್ಸ್

- Advertisement -

ಜೈಪುರ: ಸುಂದರ ಮೈಕಟ್ಟು, ಉತ್ತಮ ವ್ಯಕ್ತಿತ್ವ ಹೊಂದಿದ್ದನೆಂಬ ಏಕೈಕ ಕಾರಣದಿಂದ ದಲಿತ ಸಮುದಾಯದ ಯುವಕನೊಬ್ಬನನ್ನು ಹತ್ಯೆಗೈದಿರುವ ಘಟನೆರಾಜಸ್ಥಾನದ ಪಾಲಿ ಜಿಲ್ಲೆಯ ಬರ್ವಾ ಗ್ರಾಮದಲ್ಲಿನಡೆದಿದೆ.

ಮೃತ ವ್ಯಕ್ತಿಯನ್ನು  ಜಿತೇಂದ್ರಪಾಲ್ ಮೇಘವಾಲ್ ಎಂದು ಗುರುತಿಸಲಾಗಿದೆ. ಕೋವಿಡ್‌‌ ಆರೋಗ್ಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಜಿತೇಂದ್ರಪಾಲ್‌ ನೋಡಲು ಸುಂದರವಾಗಿದ್ದು, ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದ ಕಾರಣದಿಂದ ಕೊಲೆಯಾಗಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.

- Advertisement -

ಜಿತೇಂದ್ರಪಾಲ್ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದು, ಫೋಟೋದಲ್ಲಿ ಆತನ ಮೀಸೆ ಗಮನ ಸೆಳೆಯುತ್ತಿತ್ತು. ಇದರಿಂದ ಅಸೂಯೆಗೊಂಡ ಸೂರಜ್ ಸಿಂಗ್ ಎಂಬಾತ ಕೃತ್ಯ ನಡೆಸಿದ್ದಾನೆ ಎಂದು ಆತನ ಸಹೋದರ ಓಂಪ್ರಕಾಶ್ ಹೇಳಿದ್ದಾರೆ.

ಜಿತೇಂದ್ರಪಾಲ್ ಸ್ನೇಹಿತ ಹರೀಶ್ ಕುಮಾರ್ ಜೊತೆ ಬಾಲಿಯಿಂದ ಬರ್ವಾಗೆ ಹೋಗುತ್ತಿದ್ದ ವೇಳೆಬೈಕಿನಲ್ಲಿ ಬಂದ ಇಬ್ಬರು ಯುವಕರು ನಿಲ್ಲಿಸಲು ಹೇಳಿದ್ದು, ಒಬ್ಬಾತ ಹಿಂದೆ ಕುಳಿತಿದ್ದ ಜಿತೇಂದ್ರಪಾಲ್ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡು ಕೆಳಗೆ ಬಿದ್ದಾಗ ಹೊಟ್ಟೆ ಮತ್ತು ಎದೆಗೆ ಮತ್ತೆ ನಾಲ್ಕು ಬಾರಿ ಇರಿದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ  ತಲುಪಿಸಲು ಯತ್ನಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳಾದ ಸೂರಜ್ ಸಿಂಗ್ ಮತ್ತು ರಮೇಶ್ ಸಿಂಗ್ ಎಂಬವರನ್ನುಬಂಧಿಸಿಪ್ರಕರಣ ದಾಖಲಿಸಿಕೊಂಡಿರುವ ರಾಜಸ್ಥಾನ ಪೊಲೀಸರು ದಲಿತ ವ್ಯಕ್ತಿ ಒಳ್ಳೆಯ ಉಡುಪು ಧರಿಸಿದ್ದಕ್ಕೂ, ಆತ ಮೀಸೆ ಬಿಟ್ಟಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. “2020ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಪರಸ್ಪರ ಪೈಪೋಟಿಯ ಪರಿಣಾಮ ಈ ಕೊಲೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಜೀತೆಂದ್ರಪಾಲ್‌ ಸಹೋದರನಿಗೆ ಸರ್ಕಾರಿ ನೌಕರಿ ಮತ್ತು ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಸಂಬಂಧಪಟ್ಟ  ಅಧಿಕಾರಿಗಳು ಭರವಸೆ ನೀಡಿದ್ದಾರೆ.

Join Whatsapp