ಭೀಕರ ಕಾರು ಅಪಘಾತ; ಖ್ಯಾತ ಯೂಟ್ಯೂಬರ್ ಗಾಯತ್ರಿ ಸಾವು

Prasthutha|

ಹೈದರಾಬಾದ್:  ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್ಪಾತ್ ಗೆ ಡಿಕ್ಕಿ ಹೊಡೆದು ಖ್ಯಾತ ಯೂಟ್ಯೂಬರ್, ಜೂನಿಯರ್ ಆರ್ಟಿಸ್ಟ್ ಗಾಯತ್ರಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ‌ ಹೈದರಾಬಾದ್ ನ ಗಚ್ಚಿಬೌಲಿ ರಸ್ತೆಯಲ್ಲಿ ನಡೆದಿದೆ.

- Advertisement -

ತನ್ನ ಸ್ನೇಹಿತ ರೋಹಿತ್ ಜೊತೆಗೆ ಸೈಬರಾಬಾದ್ ವಿಪ್ರೋ ಜಂಕ್ಷನ್ನಿಂದ ಗಚ್ಚಿಬೌಲಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಪರಿಣಾಮ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ರೋಹಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಪಾನಮತ್ತ ಚಾಲನೆಯಿಂದಾಗಿ ಈ ಅಪಘಾತವುಂಟಾಗಿದ್ದು, ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ರೋಹಿತ್ ಹಾಗೂ ಗಾಯತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಅಪಘಾತದ ವೇಳೆ ಕಾರು 120ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದ್ದು, ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp